Select Your Language

Notifications

webdunia
webdunia
webdunia
webdunia

ಕೃಷ್ಣಭೈರೇಗೌಡ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಚ್‌ ಡಿ ದೇವೇಗೌಡ

HD Devegowda
ಬೆಂಗಳೂರು: ಕೃಷ್ಣಭೈರೇಗೌಡ ಅವರು ಬೆಂಗಳೂರು ನಗರ ಜಿಲ್ಲಾ ಉಸ್ತಯುವಾರಿ ಅಧಿಕಾರಿ ವಹಿಸಿಕೊಂಡಾಗಿನಿಂದಲೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯವೇ ಬೇರೆ, ಮಾಡುವ ಕೆಲಸವೇ ಬೇರೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಶ್ಲಾಘಿಸಿದರು. 

ಇಂದು ಬಿಡದಿ ಟೌನ್‌ಶಿಪ್‌ ವಿಚಾರದ ಬಗ್ಗೆ ಜೆಪಿ ಭವನದಲ್ಲಿ ಹೆಚ್‌ಡಿಡಿ ತುರ್ತು ಸುದ್ದಿಗೋಷ್ಠಿಯಲ್ಲಿ ಅವರು ಕೃಷ್ಣ ಭೈರೇಗೌಡ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ವಿಶೇಷವಾಗಿ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮತ್ತು ಅವರನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಅವರು ಮಾಡುತ್ತಿರುವ ಕೆಲಸಗಳು ಶ್ಲಾಘನೀಯ ಎಂದು ಹೇಳಿದರು.

ಸಾಮಾನ್ಯವಾಗಿ ಆಡಳಿತ ಪಕ್ಷದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸುವ ದೇವೇಗೌಡರು, ವಿಪಕ್ಷದಲ್ಲಿದ್ದರೂ ಸಚಿವರೊಬ್ಬರ ಸಾರ್ವಜನಿಕ ಹಿತಾಸಕ್ತಿಯ ಕೆಲಸವನ್ನು ಗುರುತಿಸಿ ಬೆನ್ನುತಟ್ಟಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ರಿಡ್ಜ್‌ನೊಳಗೆ ಶಿವಲಿಂಗದ ಆಕಾರ ಪಡೆದ ಮಂಜುಗಡ್ಡೆ, Video