Webdunia - Bharat's app for daily news and videos

Install App

ನಾಳೆ ಮಹತ್ವದ GST ಕೌನ್ಸಿಲ್ ಸಭೆ..! ಜನಸಾಮಾನ್ಯರಿಗೆ ಸಿಗಲಿದೆಯಾ ನೆಮ್ಮದಿ ಸುದ್ದಿ...??

Webdunia
ಶುಕ್ರವಾರ, 31 ಡಿಸೆಂಬರ್ 2021 (19:06 IST)
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ, ಡಿಸೆಂಬರ್ 31 ರಂದು 46ನೇ ಜಿ.ಎಸ್‌.ಟಿ. ಕೌನ್ಸಿಲ್ ಸಭೆ ನಡೆಯಲಿದೆ.
ಸಭೆಯು ಆಫ್‌ಲೈನ್ ಆಗಿರುವುದರಿಂದ, ಸುರಕ್ಷತೆ ಕಾಪಾಡಿಕೊಳ್ಳಲು ಸರ್ಕಾರವು ಪ್ರತಿ ರಾಜ್ಯಕ್ಕೆ ಇಬ್ಬರು ಪ್ರತಿನಿಧಿಗಳನ್ನು ಕಳಿಸಲು ಕೇಳಿದೆ.
ಜವಳಿ ಮತ್ತು ಪಾದರಕ್ಷೆಗಳ ಮೇಲಿನ ಜಿ.ಎಸ್‌.ಟಿ.ಯನ್ನು ಶೇ 5 ರಿಂದ ಶೇ 12 ಕ್ಕೆ ಹೆಚ್ಚಿಸಿರುವ ಕುರಿತು ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿದೆ. ಈ ಸಂದರ್ಭದಲ್ಲಿ ಕೌನ್ಸಿಲ್ ಸಭೆ ನಡೆಯುತ್ತಿರುವುದರಿಂದ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ಹೀಗಾಗಿ ಆಫ್ ಲೈನ್ ಮೀಟಿಂಗ್ ನಡೆಯುತ್ತಿದ್ದು, ಇತರ ವಿಷಯಗಳ ಜೊತೆಗೆ, ದರ ತರ್ಕಬದ್ಧತೆಯ ಕುರಿತು, ರಾಜ್ಯ ಸಚಿವರ ಸಮಿತಿಯ ರಚಿಸಿರುವ ವರದಿಯನ್ನು ಚರ್ಚಿಸುತ್ತದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, 1000 ರೂಪಾಯಿಗಿಂತ ಕಡಿಮೆ ಇರುವ ಎಲ್ಲಾ ಪಾದರಕ್ಷೆಗಳ ಮೇಲೆ ಶೇಕಡಾ 12 ರಷ್ಟು GST ಹಾಗೂ ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಹೊರತುಪಡಿಸಿ ಎಲ್ಲಾ ರೆಡಿಮೇಡ್ ಜವಳಿಗಳ ಮೇಲೆ ಶೇಕಡಾ 12 ರಷ್ಟು ಜಿ.ಎಸ್‌.ಟಿ. ವಿಧಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಈ ವಸ್ತುಗಳನ್ನು ಶೇ 5ರಷ್ಟು ಜಿ.ಎಸ್‌.ಟಿ. ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಪಶ್ಚಿಮ ಬಂಗಾಳದ ಮಾಜಿ ಹಣಕಾಸು ಸಚಿವ ಅಮಿತ್ ಮಿತ್ರಾ ಅವರು ಕೇಂದ್ರ ಹಣಕಾಸು ಸಚಿವರಿಗೆ ಜವಳಿ ಮೇಲಿನ ಪ್ರಸ್ತಾವಿತ ಹೆಚ್ಚಳವನ್ನು ಶೇಕಡಾ 5 ರಿಂದ 12 ಕ್ಕೆ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರಿಂದ ಸುಮಾರು ಒಂದು ಲಕ್ಷ ಜವಳಿ ಘಟಕಗಳು ಮುಚ್ಚಿಹೋಗಬಹುದು. ಒಂದು ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಮೋದಿ ಸರ್ಕಾರವು ಜನವರಿ 1 ರಂದು ಮತ್ತೊಂದು ಪ್ರಮಾದವನ್ನು ಮಾಡಲಿದೆ. ಜವಳಿ ಮೇಲಿನ GST ಅನ್ನು 5% ರಿಂದ 12% ಗೆ ಹೆಚ್ಚಿಸುವ ಮೂಲಕ, 15 ಮಿಲಿಯನ್ ಉದ್ಯೋಗಗಳು ಕಳೆದುಹೋಗುತ್ತವೆ ಮತ್ತು 1 ಲಕ್ಷ ಯೂನಿಟ್‌ಗಳು ಮುಚ್ಚಲ್ಪಡುತ್ತವೆ. ಮೋದಿ ಜೀ, ಈ ನಿರ್ಧಾರವನ್ನ ಮರುಪರಿಶೀಲಿಸುವ ಮೊದಲು GST ಕೌನ್ಸಿಲ್ ಸಭೆಗೆ ಕರೆದು ಚರ್ಚೆ ಮಾಡಿ, ಲಕ್ಷಾಂತರ ಜನಸಾಮಾನ್ಯರ ತಲೆಯ ಮೇಲೆ ಕಲ್ಲು ಹಾಕಬೇಡಿ. ಎಂದು ಮಿತ್ರಾ ಡಿಸೆಂಬರ್ 26 ರಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರದ ನಿರ್ಧಾರವನ್ನು ಹಿಂಪಡೆಯಬೇಕು ಎಂದು ವರ್ತಕರ ಸಂಘಟನೆಗಳು ಒತ್ತಾಯಿಸಿದ್ದು, ಬೆಲೆ ಬದಲಾವಣೆಯು ಬಡವರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಸಾಕಷ್ಟು ವರ್ತಕರು ಈ ಪರಿಷ್ಕರಣೆಯನ್ನ ವಿರೋಧಿಸಿದ್ದು, ನಾಳೆ ನಡೆಯಲಿರುವ ಸಭೆಯ ಮೇಲೆ ಎಲ್ಲರ ಗಮನ ಹರಿದಿದೆ‌.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments