Select Your Language

Notifications

webdunia
webdunia
webdunia
webdunia

ಮುಂಬರುವ ಚುನಾವಣೆಗೆ ಭರ್ಜರಿ ತಯಾರಿ

ಮುಂಬರುವ ಚುನಾವಣೆಗೆ ಭರ್ಜರಿ  ತಯಾರಿ
bangalore , ಭಾನುವಾರ, 19 ಮಾರ್ಚ್ 2023 (14:30 IST)
ಮುಂಬರುವ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ.ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಂಪ್ ಮಾಡೋದು ಕಾಮನ್ ಆಗಿದೆ. ಇಂದು ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ‌ ಸೇರಿದಂತೆ ಹಲವು ಜಿಲ್ಲೆಯ ನಾಯಕರು, ಕಾರ್ಯಕರ್ತರು ಜೆಡಿಎಸ್  ಪಕ್ಷಕ್ಕೆ ಸೇರ್ಪಡೆಯಾದರು.
 
ಇನ್ನೂ ಇದೆ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷದ ಪಂಚರತ್ನ ರಥಯಾತ್ರೆ ರಾಜ್ಯದ 85 ಕ್ಷೇತ್ರದಲ್ಲಿ ಪೂರ್ಣಗೊಳಿಸಿದ್ದೇನೆ, ಇದೆ 26ರಂದು ಪಂಚರತ್ನ ಯಾತ್ರೆಯ ಬೃಹತ್ ಸಮಾವೇಶ ಮಾಡಲು ನಿರ್ಧಾರ ಮಾಡಿದ್ದೇವೆ ,ಯಾವ ರೀತಿ ಪಕ್ಷದ ಅಭ್ಯರ್ಥಿ, ಕಾರ್ಯಕರ್ತರು ಕೆಲಸ ಮಾಡಬೇಕು ಅಂತ ಪೂರ್ವಬಾವಿ ಸಭೆ ಮಾಡುತ್ತಿದ್ದೇವೆ ಹಾಗೂ ಕನಿಷ್ಠ 10 ಲಕ್ಷ ಅಭಿಮಾನಿಗಳು,  ಮತದಾರರು ಸೇರಿಸಲು ನಿರ್ಧಾರ ಮಾಡಿದ್ದಾರೆ, ಕಾಂಗ್ರೆಸ್, ಬಿಜೆಪಿ ರೌಡಿ ಶೀಟರ್ಗಳಿಗೆ ಪಕ್ಷದಲ್ಲಿ ಟಿಕೆಟ್ ನೀಡ್ತಿರೋ ವಿಚಾರ,  ಆಸೆಗೆ ಅಮಾಯಕರ ಜೀವನ ಬಲಿ ಪಡೆದವರನ್ನ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಡ್ತಿದ್ದಾರೆ, ಅದೇ ಅವರ ಪಕ್ಷಕ್ಕೆ ಮುಳುಗಲಿದೆ‌, ಅಲ್ದೆ ಪಾಪದ ಹಣ ಮಾಡಲು ಹೊರಟಿದ್ದು, ಅವರಿಗೆ ಮುಳುವಾಗಲಿದೆ ಎಂದರು.

ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಫರ್ಧೆ ಮಾಡುವ ಬಗ್ಗೆ ಯೋಚನೆ ಮಾಡಬೇಕು. ಅವರು ಅನುಭವಿ ರಾಜಕಾರಣಿ ವಿರೋಧ ಪಕ್ಷ ದಲ್ಲಿದ್ದು ನಮಗೆ ಸಹಾಯ ಮಾಡಬೇಕು. ಅಲ್ಧೆ ಉರಿಗೌಡ, ನಂಜೇಗೌಡ ಅನ್ನೋದು ಚುನಾವಣೆಗೆ ಗಾಗಿ ಹುಟ್ಟಿಕೊಂಡಿರುವ .ದೇವೆಗೌಡರು ಮಾಡಿರುವ ನೀರಾವರಿ ಯೋಜನೆ ಗಳು ನಾಡಿಗೆ ಎಷ್ಟು ಅನುಕೂಲವಾಗಿದೆ ಅನ್ನೋದು ಗೊತ್ತಿದೆ. ಎಂದು ಸಿಎಂ ಇಬ್ರಾಹಿಂ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸೋಮಣ್ಣ ವಿರುದ್ಧ ಕಿಡಿಕಾರಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಲತಾ