Publish Date: Sun, 22 Mar 2020 (18:37 IST)
Updated Date: Sun, 22 Mar 2020 (18:39 IST)
ರಾಜ್ಯದ ರಾಜ್ಯಪಾಲರು ಜಾಗಟೆ ಬಡಿದು ಗೌರವ ಸಲ್ಲಿಕೆ ಮಾಡಿದ್ದಾರೆ.
ರೊನಾ ವೈರಸ್ ನಿಯಂತ್ರಣಕ್ಕೆ ಹೋರಾಡುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್, ಮಾಧ್ಯಮ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳಿಗೆ ಗೌರವ ಸೂಚಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ಮಹಾಮಾರಿ ಕರೋನಾ (ಕೋವಿಡ್-19) ವೈರಸ್ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಚಪ್ಪಾಳೆ ತಟ್ಟುವ ಮೂಲಕ ಹಾಗೂ ಜಾಗಟೆ ಬಡಿಯುವ ಮೂಲಕ ರಾಜ್ಯಪಾಲರಾದ ವಜುಭಾಯಿ ವಾಲಾ ಹಾಗೂ ರಾಜಭವನದ ಸಿಬ್ಬಂದಿ ಗೌರವ ಸೂಚಿಸಿದ್ದಾರೆ.
ರಾಜಭವನದಲ್ಲಿ ಜಾಗಟೆ ಬಾರಿಸಿದ ರಾಜ್ಯಪಾಲರು, ಕೊರೊನಾ ವೈರಸ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಮುಂಜಾಗ್ರತೆ ಕೈಗೊಳ್ಳಬೇಕೆಂದರು.
Jagadeesh
Publish Date: Sun, 22 Mar 2020 (18:37 IST)
Updated Date: Sun, 22 Mar 2020 (18:39 IST)