Publish Date: Thu, 23 Jun 2022 (10:36 IST)
Updated Date: Thu, 23 Jun 2022 (10:44 IST)
ಶಿವಮೊಗ್ಗ : ಕಾಂಗ್ರೆಸ್ ಎಲ್ಲೆಲ್ಲಿ ಇದೆಯೋ, ಎಲ್ಲೆಲ್ಲಿ ಬೇರೆ ಬೇರೆ ಪಕ್ಷಗಳಿಗೆ ಬೆಂಬಲ ಕೊಟ್ಟಿದೆಯೋ ಅಲ್ಲಿ ಕಾಂಗ್ರೆಸ್ ಮುಟ್ಟಿದವರೆಲ್ಲಾ ಸರ್ವನಾಶ ಆಗುತ್ತಿದ್ದಾರೆ.
ಮಹಾರಾಷ್ಟ್ರದಲ್ಲೂ ಸಹ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಾರಾಷ್ಟ್ರ ಸರ್ಕಾರ ಶೀಘ್ರ ಪತನವಾಗಲಿದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಅಂತಾ ಹುಡುಕುವಂತಹ ಸ್ಥಿತಿ ಇದೆ. ಅಲ್ಲಿ 3-4 ಸ್ಥಾನ ಉಳಿಸಿಕೊಂಡು ಸರ್ವನಾಶ ಆಗಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಲ್ಲೂ ಈ ಸರ್ಕಾರ ಬಿದ್ದು ಹೋಗುತ್ತಿದೆ ಎಂದರು.