Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದುಷ್ಟ ಶಕ್ತಿಗಳಿಗೆ ಸರ್ಕಾರ ಕುಮ್ಮಕ್ಕು ಕೊಡಬಾರದು- ಬೊಮ್ಮಾಯಿ

ದುಷ್ಟ ಶಕ್ತಿಗಳಿಗೆ ಸರ್ಕಾರ ಕುಮ್ಮಕ್ಕು ಕೊಡಬಾರದು- ಬೊಮ್ಮಾಯಿ
bangalore , ಬುಧವಾರ, 26 ಜುಲೈ 2023 (15:47 IST)
ತನ್ವೀರ್ ಸೇಟ್ ಪತ್ರದ ವಿಚಾರವಾಗಿ ಮಾಜಿ ಸಿಎಂ ಬೊಮ್ಮಾಯಿ‌ ಖಂಡನೆ ವ್ಯಕ್ತಪಡಿಸಿದ್ದಾರೆ.ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ ಬಹಳ ಗಂಭೀರ ಆಗಿವೆ.ಪೊಲೀಸ್ ಠಾಣೆ ಸುಟ್ಡಿದ್ದಾರೆ, ಶಾಸಕನ ಮನೆ ಸುಟ್ಟಿದ್ದಾರೆ.ಇಂಥ ಕೇಸ್ ಗಳನ್ನು ವಾಪಸ್ ಪಡೆಯಲು ಹೋಗ್ತಿರೋದು ಸರಿಯಲ್ಲ.ಇವರೆಲ್ಲ ರಾಜ್ಯದ ವಿರುದ್ಧ ದಂಗೆ ಎದ್ದವರು ಎಂದು ಮಾಜಿ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ.
 
ಅಲ್ಲದೇ ಇಂಥ ದುಷ್ಟ ಶಕ್ತಿಗಳಿಗೆ ಸರ್ಕಾರ ಕುಮ್ಮಕ್ಕು ಕೊಡಬಾರದು.ಸರ್ಕಾರ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು.ಹೊರದೇಶಗಳ ಶಕ್ತಿಗಳ ಕುಮ್ಮಕ್ಕಿನಿಂದ ಇಂತಹ ಕೃತ್ಯಗಳು ನಡೀತಿವೆ.ಸಿಎಂಗೂ ಈ ಥರದ ಕೇಸ್ ಗಳ ವಾಪಸಾತಿ ಗೆ ಮನವಿ ಕೊಟ್ಟಿದ್ದಾರೆ ಅಂತ ಕೇಳಿಬಂದಿದೆ.ಸಿಎಂ ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು.ವಿದ್ರೋಹಿ ಶಕ್ತಿಗಳ ಪರ ಸರ್ಕಾರ ನಿಲ್ಲಬಾರದು ಎಂದು ಬೊಮ್ಮಾಯಿ‌ ಆಹ್ರಿಸಿದ್ದಾರೆ.
 
ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ವಿಡಿಯೋ‌ಮಾಡಿರೋದು ಹೇಯ ಕೃತ್ಯ, ಖಂಡನೀಯ.ಒಬ್ಬ ವಿದ್ಯಾರ್ಥಿನಿ ಇದನ್ನು ಬಯಲಿಗೆಳೆದರೆ ಆಕೆ ವಿರುದ್ಧವೇ ಪೊಲೀಸರು ತನಿಖೆ ಮಾಡ್ತಾರೆ.ಪೊಲೀಸರು ಯಾರ ಒತ್ತಡಕ್ಕೆ ಕೆಲಸ ಮಾಡ್ತಿದಾರೆ.ಪೊಲೀಸರು ಏನೂ ಆಗಿಲ್ಲ ಅಂತಿದಾರೆ.ಹಾಗಾದ್ರೆ ಕಾಲೇಜಿನವ್ರು ಸುಮ್ ಸುಮ್ನೆ ಆ ಮೂವರು ವಿದ್ಯಾರ್ಥಿನಿಯರ ಸಸ್ಪೆಂಡ್ ಮಾಡಿದ್ದೇಕೆ?ಯಾಕೆ ಆ ವಿದ್ಯಾರ್ಥಿನಿಯರು ತಪ್ಪೊಪ್ಪಿಗೆ ಬರೆದುಕೊಡಬೇಕು..?ಅವರ ತಪ್ಪೊಪ್ಪಿಗೆ ಪತ್ರ ಒಂದೇ ಸಾಕು ಅವರ ವಿರುದ್ಧ ಕೇಸ್ ಹಾಕಲು ಅಂತಾ ಮಾಜಿ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ : ಸಿದ್ದರಾಮಯ್ಯ