Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಇತ್ತಿಚೇಗೆ ನಗರದಲ್ಲಿ ಗೂಂಡಾ ದರ್ಬಾರ್ ಶುರುವಾಗಿದೆ. ಎಲ್ಲಂದರೆ ಅಲ್ಲಿ ನಡು ರಸ್ತೆಯಲ್ಲಿ ಪುಂಡರು ಪುಂಡಾಟ ತೋರ್ತಿದ್ದಾರೆ. ಈ ಪುಂಡರ ಪುಂಡಾಟಿಕೆ ಕಂಡು ನಾಗರೀಕರು ರಸ್ತೆಯಲ್ಲಿ ಅಡ್ಡಾಡೋದು ಹೇಗೆ ಅನ್ನೊ ಪ್ರಶ್ನೆ ಮೂಡ್ತಿದೆ.ನಡು ರಸ್ತೆಯಲ್ಲಿ ಯವಕರನ್ನ ಅಟ್ಟಾಡಿಸಿ ಪುಡಿ ರೌಡಿಗಳ ಪುಂಡಾಟ ತೊರಿದ್ದು, ಹಾಡಹಗಲೇ ಲಾಂಗ್ ಹಿಡಿದು ಪುಂಡರ ಹುಚ್ಚಾಟ ಮೆರೆದಿದ್ದಾರೆ.
ಡಿಜೆ ಹಳ್ಳಿಯಲ್ಲಿ ಒಂದು ಗ್ಯಾಂಗ್ ನಿಂದ ಮತ್ತೊಂದು ಗ್ಯಾಂಗ್ ರೌಡಿಗಳನ್ನ ಅಟ್ಟಿಸಿಕೊಂಡು ಹೊರಟ್ಟಿದ್ದ ಪುಂಡರು ಲಾಂಗ್ ಸಿದ್ದಾರೆ.ಕೆಲ ದಿನಗಳಿಂದ ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ಪುಂಡಾಟಿಕೆ ಹೆಚ್ಚಾಗಿದ್ದು ಇದೇ ರೀತಿಯ 3 ಕ್ಕೂ ಹೆಚ್ಚು ಘಟನೆಗಳು ವರದಿಯಾಗಿವೆ.