ಬೆಂಗಳೂರು : ಕೊರೊನಾ ಸೋಂಕು ಏರಿಕೆ ನಡುವೆಯೊಂದು ಗುಡ್ ನ್ಯೂಸ್. ಪಾಸಿಟಿವಿಟಿ ದರ ಏರಿಕೆಯಾದರೂ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಪ್ರಮಾಣ ಕಡಿಮೆಯಿದೆ.
ಮಂಗಳವಾರದ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ 73,260 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪೈಕಿ ಶೇ.6 ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡನೇ ಅಲೆಗೆ ಹೋಲಿಸಿದರೆ 5 ಪಟ್ಟು ಕಡಿಮೆ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 10 ದಿನದಲ್ಲಿ 62 ಸಾವಿರ ಜನರಿಗೆ ಸೋಂಕು ಬಂದಿದ್ದರೆ ಆಸ್ಪತ್ರೆಗೆ 3,700 ಮಂದಿ ದಾಖಲಾಗಿದ್ದಾರೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ಶೇ. 0.1 ರಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ.93 ರಷ್ಟು ಜನ ಹೋಂ ಐಸೋಲೇಷನಲ್ಲಿದ್ದಾರೆ.