ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುತ್ತಿದ್ದ ಸಮವಸ್ತ್ರದಲ್ಲಿ ಗೋಲ್ ಮಾಲ್ ಮಾಡಲಾಗಿದೆ.ವಿದ್ಯಾವಿಕಾಸನ ಯೋಜನೆಯಡಿ ವಿತರಿಸಿದ ಸಮವಸ್ತ್ರಗಳಲ್ಲಿ ಗೋಲ್ ಮಾಲ್ ಆರೋಪ ಕೇಳಿಬಂದಿದ್ದು,ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ಹಿಂದಿನ ಎಂಡಿ ವಿರುದ್ದ ದೂರು ದಾಖಲಾಗಿದೆ. ಜವಳಿ ಇಲಾಖೆಯ ಆಯುಕ್ತ ಶ್ರೀಧರ್ ನಾಯಕ್ ಕಳಪೆ ಗುಣಮಟ್ಟದ ಸಮವಸ್ತ್ರ ನೀಡಿ ಭ್ರಷ್ಟಾಚಾರ ನಡೆಸಿರುವ ಆರೋಪದಲ್ಲಿ ದೂರು ದಾಖಲಿಸಿದ್ದು,2021 - 2022 ರ ಸಾಲಿನಲ್ಲಿ ಸಮವಸ್ತ್ರ ಕರ್ತವ್ಯ ದುರುಪಯೋಗ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರಿ ಶಾಲೆಗಳ 1 ರಿಂದ 10 ನೇ ತರಗತಿ ಗಂಡು ಮಕ್ಕಳಿಗೆ,1ರಿಂದ 7 ನೇ ತರಗತಿಯ ಹೆಣ್ಣು ಮಕ್ಕಳಿಗೆ ಸಮವಸ್ತ್ರ ಹಾಗೂ 8 ರಿಂದ 10 ನೇ ತರಗತಿ ಹೆಣ್ಣು ಮಕ್ಕಳಿಗೆ ಚೂಡಿದಾರ ಒಳಗೊಂಡಂತೆ.ಒಟ್ಟು 1.34.05.729 ಮೀಟರ್ ಗಳ ಎರಡನೇ ಜೊತೆ ಸಮವಸ್ತ್ರ ಬಟ್ಟೆಯನ್ನು ಸರಬರಾಜು ಮಾಡಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಆದೇಶ ಮಾಡಿದೆ.ಆದ್ರೆ ಗುಣಮಟ್ಟ ಸಮವಸ್ತ್ರ ಸರಬರಾಜು ಮಾಡದೆ ಕಳಪೆ ಸಮವಸ್ತ್ರ ಸರಬರಾಜು ಮಾಡಿರೋ ಆರೋಪ ಕೇಳಿಬಂದಿದ್ದು,ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಕರ್ತವ್ಯ ದುರುಪಯೋಗ ಮಾಡಿಕೊಂಡಿದ್ದು,ಪೀಣ್ಯಾ ಬಳಿಯಿರೋ ಏಳು ಕೈಗಾರಿಕಾ ಶೆಡ್ ಗಳನ್ನ ಬಾಡಿಗೆ ಕೊಡೋದ್ರಲ್ಲಿ ದುರುಪಯೋಗ ಆರೋಪ ಮಾಡಲಾಗಿದೆ.ಅಲ್ಲದೇ ಹಿಂದಿನ ಎಂಡಿಯಾಗಿದ್ದ ಮುದ್ದಯ್ಯ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.