Webdunia - Bharat's app for daily news and videos

Install App

1.5 Kg ತೂಕದ ಚಿನ್ನ ವಶಕ್ಕೆ

Webdunia
ಶುಕ್ರವಾರ, 11 ನವೆಂಬರ್ 2022 (18:03 IST)
ವಿದೇಶಗಳಿಂದ ದುಬಾರಿ ಬೆಲೆಯ ವಸ್ತುಗಳನ್ನು ಕೊಂಡುಕೊಂಡ್ರೆ ಭಾರತಕ್ಕೆ ಅದನ್ನು ತರಲು ಅಧಿಕ ಆಮದು ಸುಂಕವನ್ನು ತೆರಬೇಕು. ಇದನ್ನ ಅರಿತ ಕೆಲ ಮಂದಿ ಕಳ್ಳಸಾಗಾಣಿಕೆ ಮೂಲಕ ವಸ್ತುಗಳನ್ನು ತರಲು ಮುಂದಾಗ್ತಾರೆ. ವಿದೇಶದಲ್ಲಿ ಆ ವಸ್ತುಗಳು ಅಗ್ಗವಾಗಿ ದೊರೆಯುತ್ತವೆ. ಇದನ್ನರಿತ ಕೆಲ ಮಂದಿ ದೇಶಕ್ಕೆ ತೆರಿಗೆ ವಂಚನೆ ಮಾಡಲು ಕಳ್ಳ ಮಾರ್ಗ ಅನುಸರಿಸುತ್ತಾರೆ. ರಿಯಾದ್‌ನಿಂದ ಆಗಮಿಸಿದ ಭಾರತೀಯ ಪ್ರಯಾಣಿಕರೊಬ್ಬರಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿ ಕಸ್ಟಮ್ಸ್​​ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ನವದೆಹಲಿಯ IGI ವಿಮಾನ ನಿಲ್ದಾಣದ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣವನ್ನು  ದಾಖಲಿಸಿದ್ದಾರೆ. ಪ್ರಯಾಣಿಕನಿಂದ 69.99 ಲಕ್ಷ ಮೌಲ್ಯದ 1.5 ಕೆಜಿ ತೂಕದ ಎರಡು ಸಿಲಿಂಡರ್ ಆಕಾರದ ಚಿನ್ನದ ಲೋಹದ ತುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್​​ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments