Select Your Language

Notifications

webdunia
webdunia
webdunia
webdunia

ಗೌರಿ, ಗಣೇಶ ಹಬ್ಬ: ಖಾಸಗಿ ಬಸ್‌ಗಳ ದರ ದುಬಾರಿ

ಗೌರಿ, ಗಣೇಶ ಹಬ್ಬ: ಖಾಸಗಿ ಬಸ್‌ಗಳ ದರ ದುಬಾರಿ
bangalore , ಗುರುವಾರ, 14 ಸೆಪ್ಟಂಬರ್ 2023 (21:00 IST)
ಗೌರಿ, ಗಣೇಶ ಹಬ್ಬ, ವಾರಾಂತ್ಯದ ದಿನಗಳು ಒಟೊಟ್ಟಿಗೆ ಬಂದಿರುವುದರಿಂದ ರಜಾವಧಿಯಲ್ಲಿ ಊರಿಗೆ, ಪ್ರವಾಸಕ್ಕೆ ಹೋಗುವವರಿಗೆ ಖಾಸಗಿ ಬಸ್‌ಗಳ ದರ ದುಬಾರಿ ಆಗಿದೆ. ಶನಿವಾರ, ಭಾನುವಾರ ಜೊತೆಗೆ ಇರುವುದರಿಂದ ಶುಕ್ರವಾರ ಊರಿಗೆ ಹೊರಡುವವರ ಸಂಖ್ಯೆ ಹೆಚ್ಚಾಗಿದೆ. ಗುರುವಾರ, ಶುಕ್ರವಾರ ಮತ್ತು ಶನಿವಾರ ಈ ಮೂರು ದಿನಗಳಲ್ಲಿ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವವರಿಗೆ, ಮಂಗಳವಾರ ಬುಧವಾರ ಬೆಂಗಳೂರಿಗೆ ವಾಪಸ್ ಆಗುವವರಿಗೆ ಖಾಸಗಿ ಬಸ್‌ಗಳ ದರ ದುಪ್ಪಟ್ಟಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವವರಿಗೆ ಖಾಸಗಿ ಬಸ್‌ಗಳಲ್ಲಿ 7 700ರಿಂದ 1,000 ವರೆಗೆ ಇದ್ದ ದರಗಳು ಈಗ 1,500ರಿಂದ 72,500 ವರೆಗೆ ಏರಿಕೆಯಾಗಿವೆ. ಮಂಗಳೂರಿಗೆ 7 700ರಿಂದ ಕೆ 950ರವರೆಗೆ ಇದ್ದಿದ್ದು 1400ರಿಂದ 2000ಕ್ಕೇರಿದೆ. ಶಿರಸಿಗೆ 700+ 900 ಇದ್ದಿದ್ದು 2,100ರವರೆಗೆ ಹೆಚ್ಚಳವಾಗಿದೆ. ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್ ದರ ಬರೆ ಎಳೆದಿದೆ.. ಖಾಸಗಿ ಬಸ್‌ಗಳಲ್ಲಿ ದರ ಏರಿಕೆಯಾಗಿರುವುದರಿಂದ KSRTCಯ ಬಸ್‌ಗಳಲ್ಲಿ ಸೀಟ್‌ಗಳು ಭರ್ತಿಯಾಗಿವೆ. ವಿಶೇಷ ಬಸ್‌ಗಳಲ್ಲಿಯೂ ಸೀಟ್ ಇಲ್ಲದಂತಾಗಿದೆ. ಸಾರಿಗೆ ಬಸ್‌ಗಳಲ್ಲಿ ಸೀಟುಗಳು ಲಭ್ಯವಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ 5ನೇ ನಿಫಾ ಪ್ರಕರಣ ಪತ್ತೆ