ದಾವಣಗೆರೆ:ಪ್ರಿಯಕರನ ಎದುರೇ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ ನಡೆದ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಜೊಲ್ಲೆ ಚೆನ್ನಗಿರಿ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಚೆನ್ನಗಿರಿಯ ಜೋಳದಾಸ್ ಅರಣ್ಯ ಪ್ರದೇಶದಲ್ಲಿ ಅತ್ತೆಮಗನಾಗಿರುವ
ಪ್ರಿಯಕರನ ಜೊತೆ ದೇವಸ್ಥಾನದ ಬಳಿ ಸುತ್ತಾಡುತ್ತಿದ್ದಾಗ, ಇಬ್ಬರು ಯುವಕರು ಬಂದು ಪ್ರಿಯಕರನ ಜತೆ ಇದ್ದ ವಿಡಿಯೋ ಚಿತ್ರೀಕರಿಸಿದ್ದಾಗಿ ಬೆದರಿಕೆ ಹಾಕಿ, ಆತನ ಎದುರೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಈ ಸಂಬಂಧ ಬಾಲಕಿಯ ಅತ್ತೆ ಮಗನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಸ್ವಸ್ಥ ಬಾಲಕಿಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.