Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಗರಸಭಾ ಸದಸ್ಯನ ಕೈಯಲ್ಲಿ ಅರಳಿದ ಗಣಪ

ನಗರಸಭಾ ಸದಸ್ಯನ ಕೈಯಲ್ಲಿ ಅರಳಿದ ಗಣಪ
ಉತ್ತರ ಕನ್ನಡ , ಬುಧವಾರ, 12 ಸೆಪ್ಟಂಬರ್ 2018 (15:34 IST)
ಕಳೆದ ಎರಡು ತಿಂಗಳಿಂದ ರಂಗೇರಿದ್ದ  ನಗರಸಭಾ ಚುನಾವಣೆ ಕಣದಲ್ಲಿದ್ದು, ಟಿಕೆಟ್, ನಾಮಪತ್ರ, ಪ್ರಚಾರ, ಮತದಾನ ಹೀಗೆ ಪ್ರತಿನಿತ್ಯ ಬ್ಯೂಸಿಯಾಗಿರುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ನಂದನಗದ್ದಾದ 26 ನೇ ವಾರ್ಡ್ ಸದಸ್ಯ ನಂದಾ ನಾಯ್ಕ ತಮ್ಮ ಸಹೋದರ ಘನಶ್ಯಾಮ ನಾಯ್ಕ ಜತೆಗೂಡಿ ವಂಶಪಾರಂಪರ್ಯವಾಗಿ ಬಂದಂತ ಕಸುಬನ್ನು ಮುಂದುವರಿಸಿದ್ದಾರೆ.

ನಂದಾ ಹಾಗೂ ಘನಶ್ಯಾಮ ಇಬ್ಬರು ಪದವೀಧರರು.  ಅಡುಗೆ ಗುತ್ತಿಗೆ, ಶಾಮಿಯಾನ ಡೆಕೊರೆಸನ್ ಮಾಡುತ್ತಾರೆ. ಇದರ ನಡುವೆ ಬಳುವಳಿಯಾಗಿ ಬಂದಂತ ಮೂರ್ತಿ ತಯಾರಿಕೆಯನ್ನು ಮಾಡುತಿದ್ದು, ಕಳೆದೊಂದು ತಿಂಗಳಿನಿಂದ ಚುನಾವಣಾ ಒತ್ತಡದ ನಡುವೆ 6೦ಕ್ಕೂ ಹೆಚ್ಚು ಗಣಪತಿ ಮೂರ್ತಿ ತಯಾರಿಸಿದ್ದಾರೆ. ಅಲ್ಲದೆ ಕಳೆದ ಐದು ದಿನಗಳಿಂದ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಕುಮಟಾ ಹಾಗೂ ನಂದನಗದ್ದಾದಿಂದ ತಂದಂತಹ  ಮಣ್ಣನ್ನು ಬಳಸಿ ಮೂರ್ತಿಗಳನ್ನು ತಯಾರಿಸಲಾಗಿದೆ. ಅಲ್ಲದೆ ಮೂರ್ತಿಗಳಿಗೆ ನೈಸರ್ಗಿಕ ಬಣ್ಣ ಬಳಿದಿದ್ದು, ಒಂದಕ್ಕಿಂತ ಒಂದು ಭಿನ್ನವಾಗಿ ಗಮನ ಸೆಳೆಯುತ್ತಿವೆ. ಜತೆಗೆ ಗೌರಿ, ಶಾರದಾ, ದುರ್ಗಾ ಮೂರ್ತಿಯನ್ನು ತಯಾರಿಸುವ ಅವರು ಮಾಘ ಚತುರ್ಥಿಗೂ ಗಣಪತಿಗಳನ್ನು ಮಾಡಿಕೊಡುವುದು ವಿಶೇಷ.




Share this Story:

Follow Webdunia kannada

ಮುಂದಿನ ಸುದ್ದಿ

ಹಿರಣ್ಯಕೇಶಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ: ಆತಂಕದಲ್ಲಿ ಜನತೆ