Publish Date: Sat, 17 Sep 2022 (20:24 IST)
Updated Date: Sat, 17 Sep 2022 (20:30 IST)
ಹಾಸನದ ಮಲೆನಾಡು ಭಾಗದಲ್ಲಿ ಗಜಗಲಾಟೆ ನಿಂತಿಲ್ಲ. ಸಲಗಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಮುಖ ಮಾಡಿವೆ. ಗ್ರಾಮದೊಳಗೆ ಗಂಭೀರ ಹೆಜ್ಜೆ ಹಾಕುತ್ತ ಮನೆ ಮುಂದೆ ಗಜರಾಜ ಎಂಟ್ರಿ ಕೊಟ್ಟಿದ್ದು, ಜನರು ಗಾಬರಿಗೊಂಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮಗಳಾದ ಹಲಸುಲಿಗೆ, ಮಠಸಾಗರ, ಉದೇವಾರ, ಹಾಲೆಬೇಲೂರು, ಸುಂಡೇಕೆರೆಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಆನೆಗಳನ್ನು ಕಂಡು ಗ್ರಾಮಸ್ಥರು ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ. ಕಾಡಾನೆ ಕಳೆದ ಎರಡು ದಿನದಿಂದ ಗ್ರಾಮದಲ್ಲಿ ಬೀಡು ಬಿಟ್ಟಿವೆ. ಕಾಡಾನೆ ಸಮಸ್ಯೆಯಿಂದ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸ್ತಿದ್ದಾರೆ.