Publish Date: Fri, 01 Mar 2019 (21:05 IST)
Updated Date: Fri, 01 Mar 2019 (21:07 IST)
ನಿಧಿಯಾಸೆಗೆ ಪುರಾತನ ನಂದಿ ವಿಗ್ರಹ ಕಳ್ಳತನ ಮಾಡಲಾಗಿದೆ.
ನಂದಿ ವಿಗ್ರಹ ಕಳ್ಳತನ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಬಸವಪಟ್ಟಣದ ಬಳಿಯ ಮರಮನಹಳ್ಳಿ ಚಿನ್ಮೂಲಾದ್ರಿ ಬೆಟ್ಟದಲ್ಲಿನ ದೇವಸ್ಥಾನದಲ್ಲಿ ನಡೆದಿದೆ.
ನಿಧಿಯಾಸೆಗೆ ಪುರಾತನ ನಂದಿ ವಿಗ್ರಹ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಾತ್ಕಾಲಿಕವಾಗಿ ನಿರ್ಮಿಸಿದ್ದ ಕಟ್ಟೆಯ ಮೇಲೆ ವಿಗ್ರಹ ಇಟ್ಟು ಪೂಜಿಸಲಾಗುತ್ತಿತ್ತು. ರಾತ್ರಿ ವೇಳೆ ಕಳ್ಳರು ವಿಗ್ರಹ ಕಳ್ಳತನ ಮಾಡಿದ್ದಾರೆ.
ಸ್ಥಳಕ್ಕೆ ಬಸವಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.