ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಮುಂದೆ ದೇವರು ಪ್ರತ್ಯಕ್ಷ...!!!

Webdunia
ಸೋಮವಾರ, 10 ಅಕ್ಟೋಬರ್ 2022 (16:10 IST)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
 
ಸಚಿವರು ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
 
ಶಂಕು ಸ್ಥಾಪನೆ ಮುಗಿಸಿ ನಂತರ ಡಿ.ಸಿ.ಸಿ ಬ್ಯಾಂಕ್ ನಿಂದ ಸ್ತ್ರಿ ಶಕ್ತಿ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಿಕ್ಕಬಳ್ಳಾಪುರ ತಾಲೂಕಿನ ಮುಷ್ಟೂರು ಗ್ರಾಮದ ವೇದಿಕೆಗೆ ಆಗಮಿಸಿದ್ದರು.
 
ಸಚಿವರು ವೇದಿಕೆಗೆ ಬರುತ್ತಿದ್ದಂತೆ., ಮಹಿಳೆಯೊಬ್ಬರು ಮೈ ಮೇಲೆ ದೇವರು ಬಂದ ಹಾಗೆ ವರ್ತಿಸಿದ್ದಾರೆ. ಮುಷ್ಟೂರು ಗ್ರಾಮದ ರಾಧಮ್ಮ ಎಂಬ ಮಹಿಳೆ ತನ್ನ ಮೇಲೆ ಗ್ರಾಮದ ಮಹೇಶ್ವರಮ್ಮ ದೇವಿ ಬಂದಿದ್ದಾಳೆ. ದೇವಸ್ಥಾನ ಕಾಮಗಾರಿ ನಿರ್ವಹಿಸಲು ಸಚಿವರಿಗೆ ತಿಳಿಸಬೇಕು ತಾನು ದೇವಿ ಮಹೇಶ್ವರಮ್ಮ ಅವತಾರ ತನ್ನನ್ನು ಯಾರು ತಡೆಯಬೇಡಿ ಎಂದು ಕೂಗಾಡಿದರು. ಮೈ ಮೇಲೆ ದೇವರು ಬಂದ ಹಾಗೆ ಕೂಗಾಡಿ ನಾಲಿಗೆ ಹೊರಗೆ ಚಾಚಿ ಕಣ್ಣು ಕೆಂಪಗೆ ಮಾಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಕರೆದುಕೊಂಡು ಹೋಗಿ ಸಮಾಧಾನ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳ ಚುನಾವಣೆಗೆ ಎಲ್‌ಡಿಎಫ್‌, ಬಿಜೆಪಿ ನಡುವೆ ಒಪ್ಪಂದ: ಪ್ರಿಯಾಂಕಾ ಗಾಂಧಿ

ಕಸ್ಟಡಿಯಲ್ಲಿ ತಂದೆ ಮಗ ಸಾವು, ತಮಿಳುನಾಡಿನ 9ಪೊಲೀಸರಿಗೆ ಮರಣದಂಡನೆ ಶಿಕ್ಷೆ

ದೇಶದ ಅತ್ಯಂತ ಭ್ರಷ್ಟ ಕುಟುಂಬ ಕಾಂಗ್ರೆಸ್‌ನವರು ಇಂದು ಇತರರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ: ಮೋದಿ ಗುಡುಗು

ಸದ್ಯಕ್ಕೆ ಕಚ್ಚಾ ತೈಲದ ಸಮಸ್ಯೆಯಿಲ್ಲ, ಆದರೆ ಆಟೋ ಚಾಲಕರು ಎಲ್‌ಪಿಜಿ ಬದಲು ಪೆಟ್ರೋಲ್ ಬಳಸಿ: ಪ್ರಹ್ಲಾದ್ ಜೋಶಿ

ದೇಶವನ್ನು ಮೋದಿ, ಕೇರಳವನ್ನು ಪಿಣರಾಯಿ ಬಿಟ್ಟು ಮುನ್ನಡೆಸಲು ಬೇರೆಯಾರಿಲ್ಲ ಎಂದು ಭಾವಿಸಿದ್ದಾರೆ: ರಾಹುಲ್ ಕಿಡಿ

ಮುಂದಿನ ಸುದ್ದಿ
Show comments