Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಂದಿಗಿರಿ ಪ್ರದಕ್ಷಿಣೆಯಿಂದ ಕೈಲಾಸ ದರ್ಶನದಷ್ಟೇ ಪುಣ್ಯ ಕಟ್ಟಿಕೊಳ್ಳಿ

ನಂದಿಗಿರಿ ಪ್ರದಕ್ಷಿಣೆಯಿಂದ ಕೈಲಾಸ ದರ್ಶನದಷ್ಟೇ ಪುಣ್ಯ ಕಟ್ಟಿಕೊಳ್ಳಿ
ಚಿಕ್ಕಬಳ್ಳಾಪುರ , ಸೋಮವಾರ, 29 ಜುಲೈ 2019 (16:30 IST)
ಕೈಲಾಸ ಪರ್ವತವನ್ನ ಏರಿ ಪ್ರದಕ್ಷಿಣೆ ಹಾಕೋಕೆ ಆಗದವರು ನಂದಿಯ ಪಂಚಗಿರಿಯ ಸಾಲನ್ನು  ಪ್ರದಕ್ಷಿಣೆ ಹಾಕಿದರೆ ಮುಕ್ತಿ ದೊರೆಯುತ್ತೆ ಅನ್ನೋ ನಂಬಿಕೆ ಅಚಲವಾಗಿದೆ.

ಆಷಾಢ  ಮಾಸದ ಕಡೆ ಸೋಮವಾರದಂದು ಪ್ರತಿ ವರ್ಷ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಗೆ ಪ್ರದಕ್ಷಿಣೆ  ಹಾಕೋಕೆ ಸಾವಿರಾರು ಭಕ್ತರು ಇಲ್ಲಿ ಜಮಾಯಿಸ್ತಾರೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಸೇರಿದಂತೆ ನೆರೆಯ ಆಂಧ್ರದಿಂದ ಬರೋ ಭಕ್ತರು ಇವತ್ತು ಐದು ಬೆಟ್ಟಗಳ ಸಾಲನ್ನು ಹೊಂದಿರುವ ನಂದಿಗಿರಿಗೆ ಪ್ರದಕ್ಷಿಣೆ ಹಾಕಿದ್ರು.

ಆ ಮೂಲಕ  ಮೂಲಕ ತಮ್ಮ ಭಕ್ತಿ ಭಾವವನ್ನು ಹರಿಸಿದ್ರು. ಕೈಲಾಸ ಪರ್ವತದಷ್ಟೇ ಪ್ರಖ್ಯಾತಿ ಹೊಂದಿರುವ ನಂದಿಯ ಭೋಗ  ನಂದೀಶ್ವರ ದೇವಾಲಯದಿಂದ ಆರಂಭವಾಗುವ ಪ್ರದಕ್ಷಿಣೆ ಸುಮಾರು 16 ಕಿ.ಮೀ ವ್ಯಾಪ್ತಿಯಲ್ಲಿ ಬೆಟ್ಟಕ್ಕೊಂದು  ಸುತ್ತು ಬರುತ್ತದೆ.

ನಂದಿ ಗ್ರಾಮದಲ್ಲಿ ಭೋಗ ನಂದೀಶ್ವರ, ಬೆಟ್ಟದ ಮೇಲೆ ಯೋಗ ನಂದೀಶ್ವರ ಹೊಂದಿದ್ದು,  ಹಾದಿ ಮಧ್ಯೆ ಸಿಗುವ ಕಣಿವೆ ಬಸವೇಶ್ವರನಿಗೆ ಪೂಜೆ ಸಲ್ಲಿಸುತ್ತಾರೆ. ನಂದಿಗಿರಿ ಪ್ರದಕ್ಷಿಣೆಗೆ ಮಕ್ಕಳಿಂದ, ಮುದುಕರವರೆಗೂ ಸಾವಿರಾರು ಭಕ್ತಾದಿಗಳು ಆಗಮಿಸಿ ಹಾಡು, ಭಜನೆ, ನೃತ್ಯದ ಮೂಲಕ  ಪ್ರದಕ್ಷಿಣೆ ಸಾಗುತ್ತದೆ. ಭಕ್ತಾದಿಗಳು ಅಲ್ಲಲ್ಲಿ ಪ್ರಸಾದದ ವ್ಯವಸ್ಥೆಯನ್ನೂ ಮಾಡಿದ್ದರು. ಸುಮಾರು 81 ವರ್ಷದ ಇತಿಹಾಸ ಈ ಪ್ರದಕ್ಷಿಣೆಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರನ ಪತ್ನಿ, ಮಗನನ್ನೇ ಕೊಂದ ಮಾಜಿ ಸೈನಿಕ