ಸಹೋದರನ ಪತ್ನಿ ಹಾಗೂ ಆಕೆಯ ಪುತ್ರನನ್ನು ಮಾಜಿ ಸೈನಿಕನೊಬ್ಬ ಗುಂಡಿಕ್ಕಿ ಕೊಂದಿದ್ದಾನೆ.
ಆಸ್ತಿ ವಿವಾದವೇ ಈ ಕೊಲೆ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಭೂ ಸೇನೆ ನಿವೃತ್ತ ಹವಾಲ್ದಾರ್ ಸುಬ್ಬರಾಯ್ ಕೊಲೆ ಮಾಡಿರೋ ಆರೋಪಿಯಾಗಿದ್ದಾರೆ.
ಅಂಕೋಲಾದಲ್ಲಿ ಈ ಘಟನೆ ನಡೆದಿದ್ದು, ಆಸ್ತಿ ಹಂಚಿಕೆ ಕುರಿತು ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಮಾಜಿ ಸೈನಿಕ ತನ್ನ ಸಹೋದರನ ಪತ್ನಿ ಮೇದಾ (32) ಮತ್ತು ಅನುಜ (8) ಅವರನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.