ಮುಂಬರುವ ಬಜೆಟ್ ನಲ್ಲಿ ನೇಕಾರರಿಗೆ ಇನ್ನಷ್ಟು ಬೆಂಬಲ ನೀಡಲು, ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿಯವರಿಗೆ ಸಹಾಯ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಕರ್ನಾಟಕ ರಾಜ್ಯ ತೊಗಟವೀರ ಕ್ಷತ್ರಿಯ ನೇಕಾರ ಸಂಘದ ವತಿಯಿಂದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿರುವ ಸಂಘದ 'ಅಮೃತ ಮಹೋತ್ಸವ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾಯಕ, ಕರ್ತವ್ಯನಿಷ್ಠ, ಸಮಾಜಕ್ಕೆ ಮಾರ್ಯಾದೆ ತುಂಬುವ ಸಮಾಜ ನೇಕಾರರ ಸಮಾಜಮಾನವನಿಗೆ ಗೌರವ ಕೊಡುವ ನೇಕಾರ, ಅನ್ನ ನೀಡುವ ರೈತ ಕುಲ ಅನಾದಿ ಕಾಲದಿಂದ ಮನುಷ್ಯನನ್ನು ರಕ್ಷಿಸಿಕೊಂಡು ಬಂದಿವೆ. ನೇಕಾರರ ಮೂಲ ವೃತ್ತಿ ಉಳಿಯಬೇಕು ಬೆಳೆಯಬೇಕು. ಅದರ ಜೊತೆಗೆ ನೇಕಾರರು ಬೆಳೆಯಬೇಕು ಅವರ ಮಕ್ಕಳು ಬೇರೆ ಬೇರೆ ವೃತ್ತಿಗೆ ಹೋಗಬೇಕು.. ಇದಕ್ಕೆ ಬೇಕಾದಂತಹ ಎಲ್ಲಾ ಸಹಕಾರ ನಮ್ಮ ಸರ್ಕಾರ ನೀಡಲಿದೆ ಎಂದು ಸಿಎಂ ಭರವಸೆ ನೀಡಿದ್ರು.