Webdunia - Bharat's app for daily news and videos

Install App

ಇನ್ಮುಂದೆ ನಗರದ ಮರಗಳಿಗೆ ಬೀಳುತ್ತಿದ್ದ ಕೊಡಲಿ ಪೆಟ್ಟಿಗೆ ಪಾಲಿಕೆಯಿಂದ ಬ್ರೇಕ್..!

Webdunia
ಮಂಗಳವಾರ, 13 ಡಿಸೆಂಬರ್ 2022 (21:11 IST)
ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಮರಗಳ ಗಣತಿ ಕೊನೆಗೂ ಆರಂಭ ಗೊಂಡಿದೆ,ನಗರವು ದಿನದಿಂದ ದಿನಕ್ಕೆ ಬಹಳ ವೇಗವಾಗಿ ಬೆಳೆಯುತ್ತಿದೆ ಇಷ್ಟಾದರು ಪಾಲಿಕೆ ಮಾತ್ರ ನಗರದಲ್ಲಿನ ಮರಗಳ ಲೆಕ್ಕಾಚಾರ ಮಾತ್ರ ಸಂಗ್ರಹಿಸಿರಲ್ಲಿಲ್ಲ ಮೊನ್ನೆ ತಾನೆ ಹೈಕೋರ್ಟ್ ನಗರದಲ್ಲಿರುವ ಮರಗಳ ಲೆಕ್ಕಪತ್ರ ನೀಡಿ ಎಂದು ಪಾಲಿಕೆಯ ಅರಣ್ಯ ವಿಭಾಗಕ್ಕೆ ಚಾಟಿ ಬಿಸಿದ ಬೆನ್ನಲ್ಲೇ, ಎದ್ನೂ ಬಿದ್ನೂ ಅಂತಾ ಮಲ್ಲೇಶ್ವರಂ ಭಾಗದಿಂದ ಮರಗಳ ಗಣತಿಗೆ ಆ್ಯಪನ್ನು ಅಭಿವೃದ್ಧಿ ಪಡಿಸಿಕೊಂಡು ಮರಗಳ ಲೆಕ್ಕಾಚಾರ ಶುರುಮಾಡಿದೆ.
 
ಉದ್ಯಾನ ನಗರಿ ಬೆಂಗಳೂರಿನ ಮರಗಳ ಲೆಕ್ಕಾಚಾರ ಕಾರ್ಯ 2015 ರಲ್ಲೇ ಆರಂಭವಾಗಬೇಕಿತ್ತು,ರಾಜ್ಯ ಅರಣ್ಯ ಇಲಾಖೆ ಹಾಗೂ ಪಾಲಿಕೆಯ ಅರಣ್ಯ ಇಲಾಖೆ ಘಟಕದ ನಡುವಿನ ಸಮನ್ವಯ ಕೊರತೆಯಿಂದ ಈ ಕಾರ್ಯ ವಿಳಂಬವಾಗಿತ್ತು,ಈ ನಡುವೆ ಕೆಲವು ಸಂಸ್ಥೆಗಳ ಸಹಯೋಗದಲ್ಲಿ ಪಾಲಿಕೆ ಮರಗಳ ಗಣತಿ ಆರಂಭಿಸುವುದಕ್ಕೆ ಮುಂದಾಗಿತ್ತು ಆದರೆ ಗಣತಿ ನಡೆಸುವಲ್ಲಿ ವಿಫಲವಾಗಿತ್ತು,ಈ ನಡುವೆ ನ್ಯಾಯಾಲಯವು ಮರಗಳ ಗಣತಿ ನೆಡೆಸುವಂತೆ ಬಿಬಿಎಂಪಿಗೆ ತರಾಟೆ ತೆಗೆದುಕೊಂಡಿದ್ದು. ಅದರಂತೆ ಆ್ಯಪ್ ಮೂಲಕ ಮರಗಳ ಲೆಕ್ಕಾಚಾರಕ್ಕೆ ಮುಂದಾಗಿದೆ ಪಾಲಿಕೆ. 
 
 ಇದೀಗ  ವಿನೂತನ ಆ್ಯಪ್ ನೊಂದಿಗೆ ಗಣತಿ ಶುರು ಮಾಡಿರುವ ಪಾಲಿಕೆ ಪ್ರತಿ ಮರಕ್ಕೂ ಕ್ಯೂ ಆರ್ ಕೋಡ್ ಅಂಟಿಸಲಾಗುತ್ತಿದೆ,ಈ ಕ್ಯೂ ಆರ್ ಕೋಡನ್ನು ಯಾರು ಬೇಕಾದರೂ ತಮ್ಮ ಮೊಬೈಲ್ ಮೂರಲಕ ಸ್ಕ್ಯಾನ್ ಮಾಡಿ ಮರದ ಜಾತಿ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆಯಬಹುದು.ಒಟ್ಟಾರೆ ಖಾಸಗಿ ಮರಗಳಿರಲಿ ಸರ್ಕಾರಿ ಮರಗಳಿರಲಿ ಎಲ್ಲಾ ಮರಗಳಿಗೂ ಬೀಳಲಿದೆ ಕ್ಯೂ ಆರ್ ಕೋಡ್,
 
ಈಗಾಗಲೇ ಮಲ್ಲೇಶ್ವರಂ ಮತ್ತು ಮಹದೇವಪುರ ವಾರ್ಡ್ ಮಟ್ಟದಲ್ಲಿ ಪಾಲಿಕೆಯಿಂದ ಮರಗಳ ಗಣತಿ ಶುರುವಾಗಿದ್ದು ಆದಷ್ಟು ಬೇಗ ಮರಗಳ ಲೆಕ್ಕಾಚಾರ ಮಾಹಿತಿ ಕೊಡುವುದಾಗಿ ಪಾಲಿಕೆ ತಿಳಿಸಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments