ಬೆಂಗಳೂರು ಮೂಲದ ಅವಿನಾಶ್ ನಾರಾಯಣಸ್ವಾಮಿ ಎಂಬಾವರು ತನ್ನ ಕಾರಿಗೆ ಕರಿದ ಎಣ್ಣೆಯನ್ನು ಬಳಸುವ ಮೂಲಕ ಕಾರು ಓಡಿಸುತ್ತಿದ್ದಾರೆ.
ಅವಿನಾಶ್ ನಾರಾಯಣಸ್ವಾಮಿ ಕರಿದ ಎಣ್ಣೆಯನ್ನು ಜೈವಿಕ ಇಂಧನವನ್ನಾಗಿ ಮಾರ್ಪಡಿಸಿ ಬಳಸುತ್ತಿದ್ದಾರೆ.
ಅವಿನಾಶ್ ನಾರಾಯಣಸ್ವಾಮಿ ಅವರೇ ತಯಾರಿಸಿದ ಜೈವಿಕ ಇಂಧನವನ್ನು ಕಾರಿಗೆ ಇಂಧನವಾಗಿ ಬಳಸುತ್ತಿದ್ದಾರೆ. ಇದುವರೆಗೆ ಸುಮಾರು 1.20 ಲಕ್ಷ ಕಿ.ಮೀನಷ್ಟು ದೂರ ಈ ಕಾರು ಕ್ರಮಿಸಿದೆ.
ಸಾಮಾನ್ಯವಾಗಿ ಹೊಟೇಲ್ಗಳಲ್ಲಿ ಎಣ್ಣೆಯನ್ನು ಉಪಯೋಗಿಸಿ ತಿಂಡಿ ಮಾಡುತ್ತಾರೆ. ಹೀಗೆ ಉಪಯೋಗಿಸಿದ ಅಥವಾ ಕರಿದ ಎಣ್ಣೆಯನ್ನು ಅವಿನಾಶ್ ನಾರಾಯಣಸ್ವಾಮಿ ಖರೀದಿಸುತ್ತಾರೆ. ಬಳಿಕ 6 ರಿಂದ 7 ಗಂಟೆಗಳ ಕಾಲ ವಿವಿಧ ರೀತಿಯಲ್ಲಿ ಸಂಸ್ಕರಣೆ ಮಾಡುತ್ತಾರೆ. ಒಂದು ಲೀಟರ್ ಎಣ್ಣೆಗೆ 700 ರಿಂದ 800 ಎಂ.ಎಲ್ ಜೈವಿಕ ಇಂಧನ ದೊರೆಯುತ್ತದೆ. ಮಾತ್ರವಲ್ಲದೆ, ಇದರಿಂದ ಕಾರು ಕೂಡ ಚಲಿಸುತ್ತದೆ. ಅಂದಹಾಗೆಯೇ ಇತರ ಇಂಧನಕ್ಕೆ ಹೊಲಿಸಿದರೆ ಇದು ಬೆಸ್ಟ್. ಏಕೆಂದರೆ ಕಡಿಮೆ ಖರ್ಚು ಮತ್ತು ಪರಿಸರ ಸ್ನೇಹಿಯಾಗಿದೆ. ಇಂಧನದ ಬೆಲೆ 60 ರಿಂದ 65 ರೂವರೆಗೆ ವೆಚ್ಚವಾಗುತ್ತದೆ.