Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮತದಾನ ಮಾಡಿದವರಿಗೆ ಈ ಹೋಟೆಲ್ ನಲ್ಲಿ ಊಟ, ದೋಸೆ ಫ್ರೀ

Food

Krishnaveni K

ಬೆಂಗಳೂರು , ಗುರುವಾರ, 25 ಏಪ್ರಿಲ್ 2024 (09:30 IST)
ಬೆಂಗಳೂರು: ಮತದಾನ ಮಾಡಿದರೆ ಹೋಟೆಲ್ ಗಳಲ್ಲಿ ಉಚಿತ ಊಟ ನೀಡುವ ವಿಶೇಷ ಆಫರ್ ನಾಳೆ ಬೆಂಗಳೂರಿನ ಕೆಲವು ಹೋಟೆಲ್ ಗಳಲ್ಲಿರಲಿದೆ. ಇದಕ್ಕೆ ಹೈಕೋರ್ಟ್ ಅನುಮತಿಯೂ ಸಿಕ್ಕಿದೆ. ಇದರ ಬೆನ್ನಲ್ಲೇ ಕೆಲವು ಹೋಟೆಲ್ ಗಳು ಉಚಿತ ಊಟ, ದೋಸೆ ಆಫರ್ ನೀಡಿದೆ.

ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗದ ಜೊತೆಗೆ ಕೆಲವು ಖಾಸಗಿ ಸಂಸ್ಥೆಗಳೂ ಕೆಲವೊಂದು ಕ್ರಿಯಾತ್ಮಕ ಕೆಲಸಗಳನ್ನು ಮಾಡುತ್ತದೆ. ಅದರಂತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಕೆಲವು ಹೋಟೆಲ್ ಗಳಲ್ಲಿ ಉಚಿತ ಊಟ ನೀಡಲಾಗಿತ್ತು.

ಮತದಾನ ಮಾಡಿದ್ದೇವೆ ಎಂಬ ಗುರುತಿನೊಂದಿಗೆ ಬಂದರೆ ಉಚಿತ ಊಟ ನೀಡಲಾಗಿತ್ತು. ಈ ಬಾರಿ ಲೋಕಸಭೆ ಚುನಾವಣೆ ಹಿನ್ನಲೆಯಲ್ಲೂ ಕೆಲವು ಹೋಟೆಲ್ ಗಳು ಉಚಿತ ಊಟ ನೀಡಲು ಮುಂದಾಗಿದೆ. ಇದಕ್ಕೆ ಹೋಟೆಲ್ ಅಸೋಸಿಯೇಷನ್ ಗೆ ಹೈಕೋರ್ಟ್ ಅನುಮತಿಯೂ ಸಿಕ್ಕಿದೆ.

ಮತದಾರರನ್ನು ಅಮಿಷಕ್ಕೊಳಪಡಿಸದೇ ಸದುದ್ದೇಶದಿಂದ ಮತದಾನ ಮಾಡಿದವರಿಗೆ ಊಟ ನೀಡುವುದಕ್ಕೆ ಯಾವುದೇ ತೊಂದರೆಯಿಲ್ಲ ಎಂದಿದೆ. ಉಚಿತ ಊಟವಿದೆ ಎಂಬ ಕಾರಣಕ್ಕಾಗಿಯಾದರೂ ಮತದಾನ ಮಾಡಲು ಹೋಗಲಿ ಎಂಬ ಕಾರಣಕ್ಕೆ ಕೆಲವು ಹೋಟೆಲ್ ಗಳು ಇಂತಹ ಕ್ರಮಕ್ಕೆ ಮುಂದಾಗಿದೆ.

ಇದರ ಬೆನ್ನಲ್ಲೇ ನಗರದ ಕೆಲವು ಹೋಟೆಲ್ ಗಳು ದೋಸೆ, ಸಿಹಿ ತಿನಿಸು, ಊಟ ನೀಡಲು ಮುಂದಾಗಿದೆ. ವೋಟ್ ಮಾಡಿದರೆ ಊಟ ಫ್ರೀ ಎಂದು ಆಫರ್ ನೀಡಿದೆ. ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ನಲ್ಲಿ ವೋಟ್ ಮಾಡಿದ ಬಳಿಕ ಮತದಾನದ ಗುರುತಿನ ಚೀಟಿ ತೋರಿಸಿದರೆ ಉಚಿತ ದೋಸೆ, ಸಿಹಿ ತಿನಿಸು ನೀಡಲಾಗುತ್ತದೆ. ಇನ್ನಷ್ಟು ಹೋಟೆಲ್ ಗಳಲ್ಲಿ ಈ ಟ್ರೆಂಡ್ ಬರಲಿದೆ. ಇದಲ್ಲದೆ ಕೆಲವು ಆಪ್ ಆಧಾರಿತ ಕ್ಯಾಬ್ ಗಳೂ ಮತಗಟ್ಟೆಗೆ ತೆರಳಲು ಉಚಿತ ಆಫರ್ ನೀಡಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಮತದಾನ ದಿನ ಬ್ಯಾಂಕ್, ಕಚೇರಿಗಳು ಇರುತ್ತಾ? ಇಲ್ಲಿದೆ ಡೀಟೈಲ್ಸ್