ಹುಬ್ಬಳ್ಳಿ: ಆಸ್ಪತ್ರೆಯೆಂದರೆ ಜನ ಇಲ್ಲಿ ನಾವು ಸುರಕ್ಷಿತರು ಎಂಬ ಭಾವನೆಯಿಂದ ಬರುತ್ತಾರೆ. ಆದರೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯರ ಜತೆ ಸಿಬ್ಬಂದಿಗಳ ವರ್ತನೆ ನಿಜಕ್ಕೂ ಆತಂಕಕಾರಿ.
ನಾಲ್ವರು ಗರ್ಭಿಣಿ ಮಹಿಳೆಯರನ್ನು ಒಂದೇ ಸ್ಟ್ರೆಚರ್ ನಲ್ಲಿ ಕೂರಿಸಿಕೊಂಡು, ಲಿಫ್ಟ್ ನಲ್ಲಿ ಕರೆದೊಯ್ಯುವ ದೃಶ್ಯಗಳು ಮಾಧ್ಯಮಗಳ ಕಣ್ಣಿಗೆ ಬಿದ್ದಿದೆ. ಕಿಮ್ಸ್ ಸಿಬ್ಬಂದಿಯ ಈ ಬೇಜವಾಬ್ದಾರಿ ವರ್ತನೆ ನಿಜಕ್ಕೂ ಆತಂಕಕಾರಿಯಾಗಿದೆ.
ಹಿಂದೆಯೂ ಹಲವು ಬಾರಿ ಕಿಮ್ಸ್ ಆಸ್ಪತ್ರೆ ಬೇಜವಾಬ್ದಾರಿಯುತವಾಗಿ ನಡೆದುಕೊಂಡು ಸುದ್ದಿ ಮಾಡಿತ್ತು. ಸಮಯ ಉಳಿತಾಯ ಮಾಡಬೇಕೆಂದು ನಾಲ್ವರನ್ನು ಒಂದೇ ಸಾರಿ ಕರೆದುಕೊಂಡು ಹೋಗುತ್ತೇವೆ ಎಂಬ ಬೇಜವಬ್ದಾರಿಯುತ ಉತ್ತರವನ್ನು ಕಿಮ್ಸ್ ಸಿಬ್ಬಂದಿ ಉತ್ತರ ನೀಡಿದ್ದಾರೆ.
ಆದರೆ ಕಿಮ್ಸ್ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕೊರತೆಯಿಲ್ಲ. ಆದರೆ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದರೂ ಕೆಲಸ ಕಡಿಮೆ ಮಾಡಲು ಈ ರೀತಿ ಮಾಡಬೇಡಿ ಎಂದು ತಿಳಿ ಹೇಳಿದ್ದೇವೆ ಎಂದು ಕಿಮ್ಸ್ ನಿರ್ದೇಶಕ ದತ್ತಾತ್ರೇಯ ಸಮಜಾಯಿಷಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ