ಬೆಂಗಳೂರು: ಒಂದೇ ವಾರದಲ್ಲಿ ನಗರದ ಹಲಸೂರು ಠಾಣಾ ಸರಹದ್ದಿನಲ್ಲಿ ನಾಲ್ಕು ಬೈಕ್ ಕಳುವಾಗಿರುವ ಬಗ್ಗೆ ವರದಿಯಾಗಿದೆ. ರಾಯಲ್ ಎನ್ಫೀಲ್ಡ್ ಹಾಗೂ ಕೆಟಿಎಂ ಡ್ಯೂಕ್ ಬೈಕ್ ಗಳನ್ನೇ ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯಗಳು ಸೆರೆಯಾಗಿವೆ.
ಪೊಲೀಸರಿಗೆ ತಲೆನೋವಾದ ಕಳ್ಳರು: ಹಲಸೂರಿನ ಜೋಗುಪಾಳ್ಯದಲ್ಲಿ ಕೆಟಿಎಂ ಬೈಕ್ ಲಾಕ್ ಮುರಿದ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. 10 ಸೆಕೆಂಡ್ನಲ್ಲಿ ಬೈಕ್‌ನ ಹ್ಯಾಂಡ್ ಲಾಕ್ ಮುರಿದು ಬೈಕ್ ಕಳವು ಮಾಡಿರುವ ದೃಶ್ಯ ದಾಖಲಾಗಿದೆ. ಈ ಬೈಕ್ ಕಳವು ಪ್ರಕರಣಗಳು ಹಲಸೂರು ಠಾಣೆಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಹಲಸೂರು ಠಾಣೆಯ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.