Publish Date: Sat, 12 Dec 2020 (15:19 IST)
Updated Date: Sat, 12 Dec 2020 (15:21 IST)
ತೀವ್ರ ಗಮನ ಸೆಳೆದಿದ್ದ ಮಾಜಿ ಸಚಿವರ ಕಿಡ್ನಾಪ್ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.
ತಮ್ಮನ್ನು ಕಿಡ್ನಾಪ್ ಮಾಡಿ ಮೂರು ದಿನ ಬೇರೆಡೆ ಇಟ್ಟು 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಕೇಸ್ ದಾಖಲು ಮಾಡಿದ್ದರು.
ಕೇಸ್ ನ ತನಿಖೆ ಕೈಗೊಂಡಿರುವ ಪೊಲೀಸರು ವರ್ತೂರ್ ಪ್ರಕಾಶ್ ಅವರ ಪರಿಚಯಸ್ಥ ಎನ್ನಲಾಗಿರುವ ಪ್ರಮುಖ ಆರೋಪಿಯಾಗಿರುವ ಕವಿರಾಜ್ ಎಂಬಾತನನ್ನು ತಮಿಳುನಾಡಿನಲ್ಲಿ ಬಂಧನ ಮಾಡಿದ್ದಾರೆ.