ಹೇಮಾವತಿ ನೀರು ನಿರ್ವಹಣಾ ಸಭೆಯಲ್ಲಿ ವೇಳಾಪಟ್ಟಿ ಪ್ರಕಾರ ತಾಲೂಕುಗಳಿಗೆ ನೀರು ಬಿಡಲು ನಿರ್ಧಾರ ಮಾಡಲಾಗಿತ್ತು. ಆದರೆ ಮಾಜಿ ಶಾಸಕ ಎಮ್.ಟಿ ಕೃಷ್ಣಪ್ಪ ನಿಯಮ ಪಾಲಿಸದೆ ಹೇಮಾವತಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯದೇ ನೀರನ್ನು ಹರಿಸಿದ್ದಾರೆ. ಈ ವೇಳೆ ಎಸ್ಕೇಪ್ ಗೇಟಿಗೆ ಹಾನಿ ಉಂಟಾಗಿದೆ.
ತುರುವೇಕೆರೆಯಲ್ಲಿ ಈಗ ಬಿಜೆಪಿ ಮಸಾಲ ಜಯರಾಮ್ ಶಾಸಕರಾಗಿದ್ದು, ಜೆಡಿಎಸ್ ನ ಮಾಜಿ ಶಾಸಕ ಈ ರೀತಿ ದರ್ಪ ತೋರಿದಕ್ಕೆ ಬಿಜೆಪಿಯವರು ಗರಂ ಆಗಿದ್ದಾರೆ.