Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜೂಲೈ 1 ರಿಂದ ಬೆಂಗಳೂರಿನಲ್ಲಿ ಜನತಾ ಮಿತ್ರ ಕಾರ್ಯಕ್ರಮ ಪ್ರಾರಂಭ ಮಾಡ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ . ಈ ಕೂರಿತು ಮತ್ತು ಮಾತನಾಡಿ ಇವತ್ತಿನಿಂದ ಜನತಾ ಮಿತ್ರ ಕಾರ್ಯಕ್ರಮವನ್ನು ವಾರ್ಡಿನಲ್ಲಿ ಪ್ರಾರಂಭ ಮಾಡ್ತೀವಿ ಈಗಿನ ರಾಜ್ಯದ ಆಡಳಿತ 2014 ರಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿ ಇತ್ತು, ಕಳೆದ ಮೂರು ವರ್ಷದಿಂದ ಬಿಜೆಪಿ ಆಳ್ವಿಕೆಯಲ್ಲಿ ರಾಜ್ಯದ ಸಮಸ್ಯೆ ಇದೆ, ರಾಜ ಕಾಲುವೆ ಸರಿ ಇಲ್ಲ ಎಂದು ಹೇಳಿದರು.ಇನ್ನೂ 2 ದಿನ ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಬಿಜೆಪಿ ಪ್ರಗತಿ ವರದಿಯಲ್ಲಿ 33 ಸಾವಿರ ಬರಲಿದೆ ಯೋಜನೆಗಳನ್ನು ಪ್ರಕಟಿಸಲಾಗಿದೆ. ಮೋದಿಯವರಿಂದ ಬೆಂಗಳೂರು ಅಭಿರುದ್ದಿ ಆಗುತ್ತೆ ಅಂತ ಹೇಳ್ತಾರೆ ನಾನೇ ಸಾಬರ್ಬನ್ ಯೋಜನೆ ನಾನು ದೇವೇಗೌಡರು ಪ್ರಧಾನಿ ಇದ್ದಾಗ ಅತ್ರ ಮನವಿ ಮಾಡಿದ್ದೆ. 2019 ರಲ್ಲಿ ನಾನು ಸಾಬರ್ಬನ್ ತೆಗೆದುಕೊಳ್ಳಲು ಶಂಕುಸ್ಥಾಪನೆ ಮಾಡಿ ಅಂತ ಹೇಳಿದ್ದೆ, ಈ ಬಗ್ಗೆ ನಾನು ಸರ್ಕಾರಕ್ಕೆ ಮನವಿ ಮಾಡಿದೆವು . ಆದರೆ ಇವತ್ತು ಬಂದು ಶಂಕು ಸ್ಥಾಪನೆ ಮಾಡಲಾಗಿದೆ.3 ವರ್ಷ ಪ್ರಧಾನಿ ರಾಜ್ಯಕ್ಕೆ ಬಂದಿಲ್ಲ ನೆರೆ ಬಂದಾಗಲೂ ಬಂದಿಲ್ಲ ನಾವು ಅನೇಕ ಸಮಸ್ಯೆಗಳನ್ನು ಅನುಭವಿಸಿದ್ದೇವೆ. ಆಗ್ಲೂ ಬಂದಿಲ್ಲ ಯಾಕೆ ಅಂದ್ರೆ ಇಲ್ಲಿ ಬಿಜೆಪಿಗೆ ಉಳಿಗಾಲ ಇಲ್ಲ ಚುನಾವಣೆ ಇರೋದ್ರಿಂದ ಈಗ ಬಂದಿದ್ದಾರೆ. ಚುನಾವಣೆ ಇರೋದ್ರಿಂದ ಈಗ ಬಂದಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.