Publish Date: Thu, 11 May 2023 (07:52 IST)
Updated Date: Thu, 11 May 2023 (09:55 IST)
ಬೆಂಗಳೂರು : ಕರ್ನಾಟಕ ವಿಧಾನಸಭೆಗೆ ಚುನಾವಣೆ ಮುಗಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಿಂಗಾಪುರ್ ಗೆ ತೆರಳಿದ್ದಾರೆ.
ಮಧ್ಯರಾತ್ರಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಿಂಗಾಪುರ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಕಳೆದ ಆರು ತಿಂಗಳಿನಿಂದ ಸತತ ಪ್ರಚಾರ, ಪ್ರವಾಸದಿಂದ ಸುಸ್ತಾಗಿದ್ದ ಹೆಚ್ಡಿಕೆ ಎರಡು ದಿನಗಳ ಕಾಲ ವಿಶ್ರಾಂತಿಗಾಗಿ ಸಿಂಗಾಪುರ್ ಪ್ರಯಾಣ ಬೆಳೆಸಿದ್ದಾರೆ.