Publish Date: Sun, 26 Feb 2023 (18:11 IST)
Updated Date: Sun, 26 Feb 2023 (18:16 IST)
ಪೋಸ್ಟ್ ಆಫೀಸ್ ಆವರಣದಲ್ಲಿ ವಿದೇಶಿ ನೋಟನ್ನ ಶಾಸಕ ಜಮೀರ್ ಅಹ್ಮದ್ ಹಂಚಿದ್ದಾರೆ.ಸೌದಿ ಅರೇಬಿಯಾದ ೫೦೦ ಮುಖಬೆಲೆಯ ನೋಟುಗಳನ್ನ ಗೌರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ ಜಮೀರ್ ಅಹ್ಮದ್ ಹಂಚಿದ್ದಾರೆ.
ಹಣದ ಜೊತೆ ನ್ಯಾಷನಲ್ ಟ್ರಾವೆಲ್ಸ್ ಕಿಟ್ ನ್ನೂ ಶಾಸಕ ಜಮೀರ್ ನೀಡಿದ್ದು,ಸೌದಿ ಅರೇಬಿಯಾದ ೫೦೦ ರೂ.ಗೆ ಭಾರತದಲ್ಲಿ ೧೧ಸಾವಿರದ ೩೪ ರೂ. ಮೌಲ್ಯ ಇದೆ.ಪಾದರಾಯನಪುರ ವಾರ್ಡ್ ೧೩೫, ಜೆಜೆ ಆರ್ ನಗರ ವಾರ್ಡ್ ೧೩೬, ರಾಯಪುರಂ ವಾರ್ಡ್ ೧೨೭ ಆಶಾ ಕಾರ್ಯಕರ್ತೆಯರಿಗೆ ಹಣ ಹಂಚಿಕೆ ಮಾಡಿರುವ ಬಗ್ಗೆ ತಮ್ಮ ಫೆಸ್ ಬುಕ್ ಪೇಜ್ ನಲ್ಲಿ ಶಾಸಕ ಬರೆದುಕೊಂಡಿದ್ದಾರೆ. ವಿದೇಶಿ ನೋಟು ಹಂಚಿಕೆಗೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದ್ದು,ಇವತ್ತು ವಿದೇಶಿ ನೋಟು ಹಂಚ್ತಾರೆ. ನಾಳೆ ಮತ್ತೊಂದು ಮಾಡ್ತಾರೆ.ಚುನಾವಣೆಯ ಸಮಯದಲ್ಲಿ ಮತದಾರರನ್ನ ಸೆಳೆಯುವ ಪ್ರಯತ್ನವಿದು ಕೂಡಲೇ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕೆಂದು ಬಿಜೆಪಿಕಾರ್ತಕರ್ತರು ಆಗ್ರಹಿಸಿದ್ದಾರೆ.