ಪ್ರವಾಹ ಪರಿಸ್ಥಿತಿಯಲ್ಲಿ ಕುಂದಾನಗರಿ ಮುಳುಗಿದ್ದರೆ, ಇನ್ನೊಂದೆಡೆ ಬೆಳಗಾವಿಯ ಉತ್ತರದಲ್ಲಿ ಸ್ಮಾರ್ಟ ಸಿಟಿ ಕಾಮಗಾರಿಗೆ ಕೇಂದ್ರ ಸಚಿವ ಸುರೇಶ ಅಂಗಡಿ ಚಾಲನೆ ನೀಡಿದ್ದಾರೆ.
ಬೆಳಗಾವಿ ಉತ್ತರದಲ್ಲಿ ಮಾಡಲಾಗುತ್ತಿರುವ ಸ್ಮಾರ್ಟ ಸಿಟಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್‌ಗೆ ಹೈಟೆಕ್ ಅಂಬ್ಯುಲೆನ್ಸ್ ವಿತರಿಸಲಾಯಿತು.
ಇದರಲ್ಲಿ ಲೈಫ್ ಸೇವಿಂಗ್ ಇಕ್ವಿ ಪಮೆಂಟ್ಸ್, ಡೆಫಿಬ್ರಿಲೇಟರ್, ಮಲ್ಟಿ ಪ್ಯಾರಾ ಮಾನಿಟರ್, ಐಸಿಯು ವೆಂಟಿಲೇಟರ್ಸ್, ಫ್ಲಾಂಟ್ ಪ್ಯಾನಲ್ ಡಿಟೆಕ್ಟರ್ ಸೌಲಭ್ಯವಿದೆ.
ಕೇಂದ್ರ ಸಚಿವ ಸುರೇಶ ಅಂಗಡಿ, ಬೀಮ್ಸ್ ಅಭಿವೃದ್ಧಿ ಮಾಡಲಾಗುತ್ತಿದೆ. ಅಧಿಕಾರಿಗಳು ಅದರ ಸದುಪಯೋಗ ಪಡಿದುಕೊಂಡು ಒಳ್ಳೆಯ ಸೇವೆ ನೀಡಲು ಅಣಿಯಾಗಬೇಕೆಂದರು.