ನವದೆಹಲಿ : ರಾಜ್ಯದಾದ್ಯಂತ ಪ್ರವಾಹ ಪರಿಸ್ಥಿತಿ ಎದುರಾದ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ನೆರೆ ಸಂತ್ರಸ್ತಗಾಗಿ ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.
ಮಹಾಮಳೆಗೆ ಸಿಲುಕಿ ರಾಜ್ಯದ ಕೆಲವೆಡೆ ಜನರು ಅಪಾಯದ ಪರಿಸ್ಥಿತಿಯಲ್ಲಿದ್ದು, ಅವರನ್ನು ರಕ್ಷಿಸಲು ರಕ್ಷಣಾ ಪಡೆಗಳು ಹರಸಾಹಸ ಮಾಡುತ್ತಿದ್ದಾರೆ. ಈ ನಡುವೆ ಇದೀಗ ನೆರೆ ಸಂತ್ರಸ್ತರ ನೆರವಿಗೆ ನಿಂತ ಬಿ.ಎಸ್.ಎನ್.ಎಲ್. ನೆರೆ ಸಂತ್ರಸ್ತರಿಗೆ ಅನುಕೂಲವಾಗುವಂತೆ ಒಂದು ವಾರಗಳ ಕಾಲ ಉಚಿತ ಮಿತಿ ರಹಿತ ಕರೆಗಳ. ಆಫರ್ ನ್ನು ನೀಡಿದೆ.
ಪ್ರವಾಹಪೀಡಿತ ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಯಾದಗಿರಿ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ತನ್ನ ಗ್ರಾಹಕರಿಗಾಗಿ ಪ್ರತಿದಿನ 100 ಉಚಿತ ಎಸ್‌ಎಂಎಸ್ ಜೊತೆಗೆ 1ಜಿಬಿ ಡೇಟಾ ನೀಡಲಿದೆ. ಅಲ್ಲದೆ ಇತರೆ ಮೊಬೈಲ್ ನಂಬರ್ ಗೆ ಪ್ರತಿ ದಿನ 20 ನಿಮಿಷ ಉಚಿತ ಕರೆ ಮಾಡಬಹುದಾಗಿದೆ.