ಕಳೆದ ಒಂದು ವರ್ಷದಲ್ಲಿ ಡೆಂಘೀ ಜ್ವರಕ್ಕೆ ಐವರು ಬಲಿಯಾಗಿದ್ದಾರೆ. ಹಾಸನ, ವಿಜಯಪುರ, ಧಾರವಾಡ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು ಸಾವನಪ್ಪಿದ್ರೆ, ಕಳೆದ ವರ್ಷ ಡೆಂಘ್ಯೂಗೆ ಮೃತಪಟ್ಟವರ ಸಂಖ್ಯೆ 5ನ್ನ ತಲುಪಿತ್ತು, ಆದ್ರೆ ಈ ವರ್ಷ ಕೂಡ 5 ಜನ ಸಾವನ್ನಪ್ಪಿರುವುದು ಆತಂಕ ಪಡುವಂತಾಗಿದೆ. ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯೇ ಡೆಂಘೀ ಜ್ವರ ಹರಡಲು ಕಾರಣ. ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ ಇದಾಗಿದ್ದು, ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ಜನ ಮನೆಯ ಸುತ್ತಮುತ್ತ ನೀರು, ತ್ಯಾಜ್ಯ ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು. ದಿಢೀರ್ ಜ್ವರ, ತಲೆನೋವು, ಮೂಗಿನಲ್ಲಿ ಸೋರುವುದು, ಗಂಟಲು ನೋವು, ವಾಂತಿ, ಹೊಟ್ಟೆನೋವು, ತೋಳು, ಮೈ- ಕೈ ನೋವು, ಅತಿಸಾರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳು, ಗರ್ಭಿಣಿಯರು, ವೃದ್ದರು, ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರ ತಂಡ ಮಾಹಿತಿ ನೀಡಿದೆ.