Webdunia - Bharat's app for daily news and videos

Install App

ರಸ್ತೆ ಅಪಘಾತದಲ್ಲಿ ಐವರ‌ ಸಾವು

Webdunia
ಸೋಮವಾರ, 12 ಡಿಸೆಂಬರ್ 2022 (14:41 IST)
ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಿಟ್ಟನಹೊಸಹಳ್ಳಿ ಗೇಟ್ ಬಳಿ ಇನೋವಾ ಕಾರು ಮತ್ತು ಸ್ವಿಫ್ಟ್ ಕಾರುಗಳ ನಡುವೆ ಸಂಭವಿಸಿದ ಅಪಘಾತ ಸಂಭವಿಸಿದ್ದು,ಐದು ಮಂದಿ ಸ್ಥಳದಲ್ಲಿ ಸಾವನ್ನಪ್ಪಿ, ಐದು ಮಂದಿ ಗಾಯಗೊಂಡಿದ್ದಾರೆ.
 
ಇನ್ನೋವಾ ಕಾರಿನಲ್ಲಿದ್ದ ಹಾಸನ ಮೂಲದ ಶ್ರೀನಿವಾಸಮೂರ್ತಿ(74), ಜಯಂತಿ(60), ಪ್ರಭಾಕರ್ (75) ಹಾಗೂ ತಮಿಳುನಾಡು ಮೂಲದ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
 
ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿರುವ ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ.ವಿಶ್ವೇಶ್ವರ ಭಟ್(50), ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಚಲ್, ಗೌತಮ್, ಕೇವಿನ್, ಸರ್ವೇಶ್ ಗಾಯಗೊಂಡಿದ್ದಾರೆ.‌
 
 ಸಾವನ್ನಪ್ಪಿರುವ ತಮಿಳುನಾಡಿನ ಇಬ್ಬರ ಹೆಸರು ತಿಳಿದು ಬಂದಿಲ್ಲ.ಬೆಂಗಳೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು, ರಸ್ತೆಯ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಹಾಸನ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.ಸ್ಥಳದಲ್ಲೇ ಐವರು ಸಾವನ್ನಪ್ಪಿರುವುದು 
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಬೇಡಿ ನೀಡಿದ್ದಾರೆ.
 
ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ನಿವಾರಿಸಿ, ಕಾರುಗಳಲ್ಲಿದ್ದ ಐದು ಮಂದಿ ಮೃತರ ಶವಗಳನ್ನು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ  ಸ್ಥಳಾಂತರ ಮಾಡಲಾಗಿದೆ.ಬಿಂಡಿಗನವಿಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಕ್ಕೆ ರಾತ್ರಿ ಸುರಿಯುತ್ತಿದ್ದ ಜಿಟಿಜಿಟಿ ಮಳೆಯೂ ಕಾರಣವಾಗಿದೆ.ಮಳೆಯಾದಾಗ ಈ ಸ್ಥಳದಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ.ಹೀಗಿದ್ದರೂ ಹೈವೆಯವರಾಗಲಿ, ಪೋಲಿಸರಾಗಲಿ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ ಮಾಡಿದ್ದಾರೆ.
 
 ಮದುವೆ ಮನೆಯಿಂದ ಸ್ಮಶಣಕ್ಕೆ ಹೋದಂತೆಯಾಗಿದೆ.ಇನ್ನೋವಾ ಕಾರಿನಲ್ಲಿದ್ದ ಹಾಸನ ಮೂಲದ ಶ್ರೀನಿವಾಸಮೂರ್ತಿ(50), ಜಯಂತಿ(45) ಅವರು ಬಾಡಿಗೆ ಕಾರಿನಲ್ಲಿ ಮದುವೆಗೆಂದು ಬೆಂಗಳೂರಿಗೆ ತೆರಳಿದ್ದರು.ಮದುವೆ ಮುಗಿಸಿಕೊಂಡು ಹಾಸನಕ್ಕೆ ವಾಪಾಸ್ಸಾಗುವಾಗ ಈ ಅವಘಡ ಸಂಭವಿಸಿದೆ.ಮದುವೆಗೆ ಹೋಗಿದ್ದವರು ಇದೀಗ ಮಸಣ ಸೇರುವಂತಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನ ಪರ ಬೇಹುಗಾರಿಗೆ: ಎನ್‌ಐಎಯಿಂದ ಯೂಟ್ಯೂಬರ್‌ ಜ್ಯೋತಿಗೆ ನಾನಾ ರೀತಿಯಲ್ಲಿ ಪ್ರಶ್ನೆ

ಕನ್ನಡ ಮಾತೇ ಆಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ? SBI ಅಧಿಕಾರಿಯ ದರ್ಪ: video

Pahalgam Attack, ಅಂದು ಮೋದಿ ಎಚ್ಚರಿಕೆ ನೀಡುತ್ತಿದ್ದರೆ 26 ಮಂದಿಯ ಜೀವ ಉಳಿಯುತ್ತಿತ್ತು: ಮಲ್ಲಿಕಾರ್ಜುನ ಖರ್ಗೆ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

IMD, ಕೇರಳಕ್ಕೆ ನಾಲ್ಕೈದು ದಿನಗಳಲ್ಲಿ ಮುಂಗಾರು ಪ್ರವೇಶ

ಮುಂದಿನ ಸುದ್ದಿ
Show comments