Webdunia - Bharat's app for daily news and videos

Install App

ಮೊದಲು ಸುಡುವುದಕ್ಕೆ ಜಾಗ ಕೊಡಿ, ಆಮೇಲೆ ಕಾಂಪೌಂಡ್ ಆದ್ರೂ ಕಟ್ಟಿ, ಕೋಟೆನಾದ್ರೂ ಕಟ್ಟಿ: ಸಿಟಿ ರವಿ ವ್ಯಂಗ್ಯ

Sampriya
ಶುಕ್ರವಾರ, 7 ಮಾರ್ಚ್ 2025 (15:24 IST)
ಬೆಂಗಳೂರು: ಮೊದಲು ಸುಡುವುದಕ್ಕೆ ಜಾಗ ಕೊಡಿ, ಆಮೇಲೆ ಕಾಂಪೌಂಡ್ ಆದ್ರೂ ಕಟ್ಟಿ, ಕೋಟೆನಾದ್ರೂ ಕಟ್ಟಿ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ವಿರುದ್ದ ಎಂಎಲ್‌ಸಿ ಸಿಟಿ ರವಿ ಆಕ್ರೋಶ ಹೊರಹಾಕಿದರು.

ವಿಧಾನಸೌಧದಲ್ಲಿ ಬಜೆಟ್‌ ಬಗ್ಗೆ ಅಸಮಾಧಾನ ಹೊರಹಾಕಿದ ಅವರು, ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ, ಡಿಸಿಎಂ ಆಗಿ, ಮುಖ್ಯಮಂತ್ರಿಯಾಗಿ  16ನೇ ಬಜೆಟ್‌ ಮಂಡಿಸಿ ಖ್ಯಾತಿ ಪಡೆಯುವರೊಂದಿಗೆ ಅತೀ ಹೆಚ್ಚು ಸಾಲ ಮಾಡಿಯು ಕುಖ್ಯಾತಿಯನ್ನು ಪಡೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಬಜೆಟ್‌ ಗಾತ್ರ ಜಾಸ್ತಿ ಆಗುತ್ತಾ ಹೋಗಿದೆ. ಕಳೆದ ವರ್ಷದ ಬಜೆಟ್‌ನ್ನು ಅವಲೋಕಿಸಿದಾಗ  3 ಲಕ್ಷದ 22ಸಾವಿರ ಕೋಟಿ ರೂಪಾಯಿ ವಿವಿಧ ಯೋಜನೆಗೆಳಿಗೆ ಘೋಷಣೆ ಮಾಡಿದ್ದು. ಇದುವರೆಗೂ ಖರ್ಚು ಆಗಿದ್ದು ಬರೀ 1ಲಕ್ಷ 75ಸಾವಿರ ಕೋಟಿ ರೂಪಾಯಿ. ಇನ್ನೂ ಒಂದೂವರೆ ತಿಂಗಳ ಒಳಗೆ ಉಳಿದ ಹಣವನ್ನು ಖರ್ಚು ಮಾಡಲು ಸಾಧ್ಯವೇ.  ಇದು ಅನುಷ್ಠಾನವಾಗುವ ಬಜೆಟ್‌ ಅಲ್ಲ, ಬರೀ ಘೋಷಣೆಯಾ ಬಜೆಟ್ ಎಂದು ವ್ಯಂಗ್ಯ ಮಾಡಿದರು.

ಈ ಬಜೆಟ್‌ನಲ್ಲೂ ಕೋಮುವಾದಿ ರೀತಿ ಮುಂದುವರೆದಿದೆ. ಸಿದ್ದರಾಮಯ್ಯ  ಪ್ರಕಾರ ಜಾತ್ಯಾತೀತತೆ ಎಂದರೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ. ಎಷ್ಟೋ ಸಮುದಾಯಗಳಿಗೆ ಹೂಳಕ್ಕೆ ಸರಿಯಾದ ಸ್ಮಶಾನವೇ ಇಲ್ಲ, ಅವರಿಗೆ ಮೊದಲು ಹೂಳಕ್ಕೆ ಜಾಗ ಕೊಟ್ಟು ಆಮೇಲೆ ಕಾಂಪೌಂಡ್ ಆದ್ರೂ ಕಟ್ಟಿ, ಕೋಟೆನಾದ್ರೂ ಕಟ್ಟಿ ಎಂದು ಆಕ್ರೋಶ ಹೊರಹಾಕಿದರು.

ಅಲ್ಪಸಂಖ್ಯಾತರಿಗಾಗಿ ಸ್ಮಶಾನಕ್ಕೆ ಕಾಂಪೌಂಡ್ ಕಟ್ಟುವುದು ಇವರಿಗೆ ಆಧ್ಯತೆಯಾಗಿದೆ. ಎಷ್ಟೂ ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಅದು ಆದ್ಯತೆಯಾಗಬೇಕಿತ್ತು. ಮೊದಲು ಸುಡುವುದಕ್ಕೆ ಜಾಗ ಕೊಡಿ, ಆಮೇಲೆ ಏನ್‌ ಬೇಕಾದ್ರೂ ಕಟ್ಟಿ ಎಂದು ಕಿಡಿಕಾರಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನಮ್ಮವರೇ ಹೀಗೇ ಮಾಡಿದ್ರೆ ಏನ್‌ ಮಾಡೋದು

ಪಾಕ್‌ನಲ್ಲಿ ತೀವ್ರವಾದ ಆಹಾರ ಅಭದ್ರತೆ: 11ಮಿಲಿಯನ್ ಜನರ ಮೇಲೆ ಪರಿಣಾಮ ಸಾಧ್ಯತೆ

ದೇವೇಗೌಡರಿಗೆ 92ನೇ ಜನ್ಮದಿನದ ಸಂಭ್ರಮ: ಮೋದಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ಮುಂದಿನ ಸುದ್ದಿ
Show comments