Publish Date: Wed, 27 Oct 2021 (20:54 IST)
Updated Date: Wed, 27 Oct 2021 (20:57 IST)
ಅಪರಾಧ ಪ್ರಕರಣದಲ್ಲಿ ಬಂಧಿಸಲೋಗಿದ್ದ ರೌಡಿಶೀಟರ್ ಮೇಲೆ ಪೊಲೀಸ್ರು ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುಖ್ಯಾತ ರೌಡಿಶೀಟರ್ ಸ್ಯಾಮುಯಲ್ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗುರುಪ್ರಸಾದ್ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಕೊಲೆಯತ್ನ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಸ್ಯಾಮುಯಲ್ ಸಂಪಿಗೆಹಳ್ಳಿ ಬಳಿ ಇರೋ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಆತನನ್ನ ಬಂಧಿಸಲು ಅಮೃತಹಳ್ಳಿ ಪೊಲೀಸ್ರು ತೆರಳಿದ್ದು, ತಪ್ಪಿಸಿಕೊಳ್ಳ ಭರದಲ್ಲಿ ಸ್ಯಾಮುಯಲ್ ಪಿಎಸ್ ಐ ಪ್ರಕಾಶ್ ಮೇಲೆ ಹರಿತವಾದ ಚಾಕುವಿನಿಂದ ಹಲ್ಲೆ ನಡೆಸಿ, ಎಡಗೈ ಗಾಯಗೊಳಿಸಿದ್ದ. ಈ ವೇಳೆ ಸ್ಥಳದಲ್ಲಿದ್ದ ಇನ್ಸ್ ಪೆಕ್ಚರ್ ಆತ್ಮರಕ್ಷಣೆಗಾಗಿ ಸ್ಯಾಮುಯಲ್ ಮೇಲೆ ಗುಂಡು ಹಾರಿಸಿ, ಬಲಗಾಲನ್ನ ಗಾಯಗೊಳಿಸೋ ಮೂಲಕ ಬಂಧಿಸಿದ್ದಾರೆ. ಸದ್ಯ ಗಾಯಗೊಂಡಿರೋ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ರೌಡಿಶೀಟರ್ ಸ್ಯಾಮುಯಲ್ ಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೊಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
geetha
Publish Date: Wed, 27 Oct 2021 (20:54 IST)
Updated Date: Wed, 27 Oct 2021 (20:57 IST)