Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್‌: ಇದು ಬೆದರಿಕೆಯೊಡ್ಡುವ ಸಿಎಂ ತಂತ್ರ ಎಂದ ವಿಜಯೇಂದ್ರ

MUDA Scam, Shneha Mahi Krishna, BJP President BY Vijayendra

Sampriya

ಬೆಂಗಳೂರು , ಭಾನುವಾರ, 17 ನವೆಂಬರ್ 2024 (12:20 IST)
ಬೆಂಗಳೂರು: ತಮ್ಮ ಹಾಗೂ ಕುಟುಂಬದ ಭ್ರಷ್ಟಾಚಾರ ಬಯಲು ಮಾಡಿ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು (ಸ್ನೇಹಮಯಿ ಕೃಷ್ಣ) ಹಣಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹಿಂಬಾಲಕರನ್ನು ಬಿಟ್ಟು ಸುಳ್ಳು ದೂರುಗಳನ್ನು ಕೊಡಿಸಿ ಬೆದರಿಕೆಯೊಡ್ಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಮುಡಾ ಹಗರಣದ ದೂರುದಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ‌ ಕೃಷ್ಣ ಬಂಧನ ಹಾಗೂ ಗಡಿಪಾರಿಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಶನಿವಾರ ಇಲ್ಲಿನ ಲಕ್ದ್ಮಿಪುರಂ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ.  ಈ ಸಂಬಂಧ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು,  ತಮ್ಮ ಹಾಗೂ ಕುಟುಂಬದ ಭ್ರಷ್ಟಾಚಾರ ಬಯಲು ಮಾಡಿ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು (ಸ್ನೇಹಮಯಿ ಕೃಷ್ಣ)ಹಣಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ಹಿಂಬಾಲಕರನ್ನು ಬಿಟ್ಟು ಸುಳ್ಳು ದೂರುಗಳನ್ನು ಕೊಡಿಸಿ ಬೆದರಿಕೆಯೊಡ್ಡುವ ತಂತ್ರ ಅನುಸರಿಸುತ್ತಿದ್ದಾರೆ.

ಪೊಲೀಸ್ ಬಲ ಪ್ರಯೋಗಿಸಿ ಇಂತಹ ಆಧಾರ ರಹಿತ ದೂರುಗಳನ್ನು ದಾಖಲಿಸಿಕೊಂಡು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ದಾರಿಯಲ್ಲಿ ಹೋರಾಡುತ್ತಿರುವ ಕಾರ್ಯಕರ್ತರೊಬ್ಬರನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ. ಇದು ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ನವರ ಹತಾಶೆಯ ಎಲ್ಲೆ ಮೀರಿದ ದೌರ್ಜನ್ಯವನ್ನು ಪ್ರತಿಬಿಂಬಿಸುತ್ತದೆ.

ತೋಳ್ಬಲ ಹಾಗೂ ಅಧಿಕಾರ ಬಲವನ್ನು ಪ್ರಯೋಗಿಸಿ ಒಬ್ಬ ಜನಪರ ಕಾಳಜಿಯ ಸಾಮಾನ್ಯ ಪ್ರಜೆಯ ಹೋರಾಟದ ಹಕ್ಕನ್ನು ದಮನ ಮಾಡುವ ನೀಚ ಬೆಳವಣಿಗೆ ಇದಾಗಿದೆ. ಬಿಜೆಪಿ ಇದನ್ನು ಅತ್ಯುಗ್ರವಾಗಿ ಖಂಡಿಸುತ್ತದೆ. ಸುಳ್ಳು ದೂರು, ಬೆದರಿಕೆಗಳು ಮುಂದುವರೆದಲ್ಲಿ ಸಾಮಾಜಿಕ ಕಾರ್ಯಕರ್ತರ ರಕ್ಷಣೆಗೆ ಬಿಜೆಪಿ ನಿಲ್ಲಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು: ಬಡವರ ಸಾವಿಗೆ ಕಾಂಗ್ರೆಸ್‌ ಸರ್ಕಾರದಲ್ಲಿ ಬೆಲೆ ಇಲ್ಲ