ಸತ್ತವರ ಹೆಸರಿನಲ್ಲಿ ಸರ್ಕಾರದಿಂದ ನೀಡಿದಂತ ಈ ಪರಿಹಾರದ ಹಣ ಬೇಡ. ರಾಜ್ಯದಲ್ಲಿ ಕೋವಿಡ್ ತಂದಿಟ್ಟಂತ ಆರ್ಥಿಕ ಸಂಕಷ್ಟದಿಂದ ಅನೇಕ ಜನರಿದ್ದಾರೆ. ಅವರಿಗೆ ಈ ಹಣವನ್ನು ಕೊಡಿ ಎಂಬುದಾಗಿ ರಾಜ್ಯ ಸರ್ಕಾರ ಕೋವಿಡ್ ನಿಂದ ಮೃತಪಟ್ಟಂತ ಜನರಿಗೆ ನೀಡಿದ ಪರಿಹಾರದ ಹಣವನ್ನು ವಾಪಾಸ್ ನೀಡಿ, ನೋವಿನಲ್ಲಿಯೂ ಮಾನವೀಯತೆಯನ್ನು ಅನೇಕ ಕುಟುಂಬಸ್ಥರು ಮೆರೆದಿದ್ದಾರೆ.
ಹೌದು.. ಕೋವಿಡ್ ನಿಂದ ಸಾವನ್ನಪ್ಪಿದಂತ ಕುಟುಂಬಸ್ಥರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೋವಿಡ್ ನಿಂದ ಸಾವನ್ನಪ್ಪಿದಂತ ಎಪಿಎಲ್ ಮತ್ತು ಬಿಪಿಎಲ್ ಕುಟುಂಬಸ್ಥರಿಗೆ 1.50 ಲಕ್ಷ ಪರಿಹಾರವನ್ನು ಘೋಷಣೆ ಮಾಡಿತ್ತು.
ಈ ಪರಿಹಾರದ ಹಣವನ್ನು ಕೊರೋನಾದಿಂದ ಮೃತಪಟ್ಟವರಿಗೆ ನೀಡೋದಕ್ಕೆ ಹೋದಂತ ಸರ್ಕಾರಕ್ಕೆ, ಕುಟುಂಬಸ್ಥರು ನಮಗೆ ಸತ್ತವರ ಹೆಸರಿನಲ್ಲಿ ಸರ್ಕಾರದಿಂದ ನೀಡಿದಂತ ಈ ಪರಿಹಾರ ಬೇಡ. ಈ ಹಣವನ್ನು ಕೋವಿಡ್ ನಿಂದ ಸಂಕಷ್ಟಕ್ಕೆ ಒಳಗಾಗಿರುವಂತ ಬಡ ಕುಟುಂಬಗಳಿಗೆ ನೀಡಬೇಕೆಂದು ಹಿಂದಿರುಗಿಸಿ, ಮಾನವೀಯತೆ ಮೆರೆದಿವೆ.
ಅಂದಹಾಗೇ ರಾಜಧಾನಿ ಬೆಂಗಳೂರು ಒಂದರಲ್ಲೇ 481 ಕುಟುಂಬಗಳು ಕೋವಿಡ್ ಪರಿಹಾರ ಧನವನ್ನು ನಿರಾಕರಿಸಿವೆ. ಬೆಂಗಳೂರಿನ 481 ಸೇರಿದಂತೆ ರಾಜ್ಯಾಧ್ಯಂತವೂ ಪರಿಹಾರ ಧನ ನಿರಾಕರಿಸೋ ಸಂಖ್ಯೆ ಏರಿಕೆಯಾಗಿದೆ. ಈ ಪರಿಹಾರದ ಹಣವನ್ನು ಸಂಕಷ್ಟದಲ್ಲಿರೋರಿಗೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿವೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕುಟುಂಬಗಳು ಕೋವಿಡ್ ಪರಿಹಾರ ಧನ ನಿರಾಕರಣೆ.?
ಹೀಗೆ ರಾಜ್ಯಾಧ್ಯಂತ ಒಟ್ಟು 893 ಕುಟುಂಬಗಳು ಕೋವಿಡ್ ಪರಿಹಾರ ಧನ ನಮಗೆ ಬೇಡ. ರಾಜ್ಯದಲ್ಲಿ ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿರುವಂತ ಬಡ ಕುಟುಂಬಗಳಿಗೆ ಹಣ ನೀಡಿ ಎಂಬುದಾಗಿ ಕುಟುಂಬದ ಮೃತರ ಸಾವಿನ ನೋವಿನಲ್ಲಿಯೂ ಮಾನವೀಯತೆಯನ್ನು ಕುಟುಂಬಸ್ಥರು ಮೆರೆದಿದ್ದಾರೆ.