Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಾರು ಮತ್ತು ಬೈಕ್ ಅಪಘಾತ ವಿಚಾರದಲ್ಲಿ ಯುವಕರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಬಸ್ ನಿಲ್ದಾಣದ ಬಳಿ ನಡೆದಿದೆ. ಮೊದಲಿಗೆ ಮಂಗಳೂರಿನಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ ಕಾರಿನಲ್ಲಿದ್ದ ಮೂವರು ಯುವಕರು ಬೈಕ್ ಸವಾರ ರಹೀಮುದ್ದಿನ್ ಮೇಲೆ ಹಲ್ಲೆ ಮಾಡಿದ್ರು. ಇದನ್ನ ಖಂಡಿಸಿದ ಸ್ಥಳೀಯರು ಕಾರಿನಲ್ಲಿದ್ದ ಶ್ಯಾಮಪ್ರಸಾದ್, ಅಕ್ಷಯ್, ಸುದೀಪ್ ಎಂಬುವರನ್ನ ಥಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಿ ಠಾಣೆಗೆ ಕರೆದುಕೊಂಡು ಹೋದ ಬೆಳ್ತಂಗಡಿ ಪೊಲೀಸರು, ಮಾತುಕತೆ ನಡೆಸಿ ರಾಜಿ ಮಾಡಿಸಿದ್ರು.