Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ವೇದಿಕೆ ಮೇಲೆ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಸಚಿವ ಅಶ್ವಥ್ ನಾರಾಯಣ ಮತ್ತು ಕಾಂಗ್ರೆಸ್ ಸಂಸದ ಅಶ್ವಥ್ ನಾರಾಯಣ ಪರಸ್ಪರ ವಾಗ್ವಾದ ಜಟಾಪಟಿ ನಡೆಸಿದ ಘಟನೆ ರಾಮನಗರದಲ್ಲಿ ನಡೆದಿದೆ.
ಅಶ್ವಥ್ ನಾರಾಯಣ್ ಮಾತನಾಡುತ್ತಿದ್ದ ವೇಳೆ ಮೈಕ್ ಬಳಿಗೆ ಬಂದ ಡಿಕೆ ಸುರೇಶ್ ನಡುವೆ ಮಾತಿನ ಚಕಮಕಿ ನಡೆಯಿತು.
ಎರಡೂ ಪಕ್ಷದ ಕಾರ್ಯಕರ್ತರು ವೇದಿಕೆಗೆ ನುಗ್ಗಿದ್ದು, ಮೈಕ್ ಕಿತ್ತು ಬಿಸಾಡಿದ್ದಾರೆ.
ರಾಮನಗರ ಜಿಲ್ಲೆಯ ಅಭಿವೃದ್ಧಿ ಯಾರು ಮಾಡಿಲ್ಲ. ನಮ್ಮ ಬಿಜೆಪಿ ಪಕ್ಷ ಮಾತ್ರ ಮಾಡಿರುವುದು ಎಂದ ಅಶ್ವಥ್ ನಾರಾಯಣ್ ಮಾತಿಗೆ ಮೊದಲು ಶಾಸಕಿ ಅನಿತಾ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ನಾವು ರಾಜಕೀಯ ಮಾತನಾಡಲು ಬಂದಿಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದೇವೆ ಎಂದಾಗ ಸಿಡಿದೆದ್ದ ಡಿಕೆ ಸುರೇಶ್ ಅಶ್ವಥ್ ನಾರಾಯಣ ಬಳಿ ಬಂದು ವಾಗ್ದಾದಕ್ಕಿಳಿದರು.
ಅಶ್ವಥ್ ನಾರಾಯಣ್ ಬಳಿಗೆ ಬಂದ ಡಿಕೆ ಸುರೇಶ್, ಏನ್ ಅಭಿವೃದ್ಧಿ ಮಾಡಿದ್ದೀಯಾ? ರೇಷ್ಮೆಗೆ ನಿಮ್ಮ ಪಕ್ಷದ ಮೊದಲು ಬೆಂಬಲ ಕೊಟ್ಟಿರೋದು ಎಂದು ಪ್ರಶ್ನಿಸಿದರು.