ಫೆ.29 ಮೇಕೆದಾಟು ಪಾದಯಾತ್ರೆ ಪ್ರಾರಂಭ

Webdunia
ಗುರುವಾರ, 17 ಫೆಬ್ರವರಿ 2022 (15:06 IST)
ಕೋವಿಡ್ ಹಿನ್ನೆಲೆಯಲ್ಲಿ ಮೊಟಕುಗೊಳಿಸಿದ್ದ 'ನಮ್ಮ ನೀರು ನಮ್ಮ ಹಕ್ಕು' ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ 'ಕಾಂಗ್ರೆಸ್ ಪಾದಯಾತ್ರೆ' ಫೆ.27ರಿಂದ ರಾಮನಗರದಿಂದ ಪುನರ್ ಆರಂಭ ಮಾಡಲಾಗುವುದು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಬಜೆಟ್ ಅಧಿವೇಶನ ಆರಂಭವಾಗುವುದರೊಳಗೆ ಮೇಕೆದಾಟು ಪಾದಯಾತ್ರೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ನಗರದಲ್ಲಿ ಈ ಹಿಂದೆ ಉದ್ದೇಶಿಸಿದ್ದ ಮಾರ್ಗದಲ್ಲಿ ಕೆಲ ಮಾರ್ಪಾಡು ಮಾಡಲಾಗುವುದು' ಎಂದು ತಿಳಿಸಿದರು.
 
ಜ.9ರಿಂದ ಕನಕಪುರ ಜಿಲ್ಲೆಯ ಸಾತನೂರು ಸಮೀಪದ ಸಂಗಮದಿಂದ ಮೇಕೆದಾಟು ಪಾದಯಾತ್ರೆ ಆರಂಭಿಸಲಾಗಿತ್ತು. ಅಲ್ಲಿಂದ ದೊಡ್ಡ ಆಲಹಳ್ಳಿ, ಕನಕಪುರ, ಕೆ.ಪಿ.ದೊಡ್ಡಿ ಮೂಲಕ ಜ.13ಕ್ಕೆ ರಾಮನಗರ ತಲುಪಿತ್ತು. ಈ ವೇಳೆಗೆ ರಾಜ್ಯದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಹೀಗಾಗಿ ಜ.14ರಂದು ಪಾದಯಾತ್ರೆ ಮಾರ್ಗಮಧ್ಯೆ ಸ್ಥಗಿತಗೊಳಿಸಲಾಗಿತ್ತು.
 
ಇದೀಗ ಕೋವಿಡ್ ಸೋಂಕು ಇಳಿಕೆಯಾಗಿದ್ದು, ಪಾದಯಾತ್ರೆ ಪುನರ್ ಆರಂಭ ಮಾಡಲು ಕಾಂಗ್ರೆಸ್ ಉದ್ದೇಶಿಸಿದೆ. ಇದೀಗ ರಾಮನಗರದಿಂದ ಬೆಂಗಳೂರಿನ ವರೆಗೂ ಉಳಿದ 6 ದಿನಗಳ ಪಾದಯಾತ್ರೆ ಮುಂದುವರೆಯಲಿದೆ. ಈ ಸಂಬಂಧ ಪಕ್ಷದಲ್ಲಿ ಸಮಾಲೋಚನೆ ನಡೆಸಿದ್ದು, ಬೆಂಗಳೂರು ನಗರದ ಪಕ್ಷದ ಎಲ್ಲ ಶಾಸಕರು ಹಾಗೂ ಮುಖಂಡರೊಂದಿಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಅಸೆಂಬ್ಲಿಯಲ್ಲಿ ಭಾರೀ ಭದ್ರತಾ ಲೋಪ, ಗೇಟ್ ಮುರಿದು ಒಳನುಗ್ಗಿದ ಕಾರು, ಕೆಲಕಾಲ ಆತಂಕ

ಈ ಅವಧಿಯನ್ನು ಸಿದ್ದರಾಮಯ್ಯನವರೇ ಸಿಎಂ ಆಗಿ ಪೂರೈಸುತ್ತಾರೆ: ಜಿ ಪರಮೇಶ್ವರ್‌

ಜಿಮ್ ಟ್ರೈನರ್‌ ಸಮೀರ್‌ ಅತ್ಯಾಚಾರ ಕೇಸ್‌: ಮಹತ್ವದ ಬೆಳವಣಿಗೆ

ಯುಎಸ್‌ ಇಸ್ರೇಲ್ ದಾಳಿಗೆ ಇರಾನ್‌ನ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಹತ್ಯೆ

ದಾವಣೆಗೆರೆಯಲ್ಲಿ ಕಾಂಗ್ರೆಸ್ ಸೋಲಲು ಇದೊಂದು ಕಾರಣ ಸಾಕು ಎಂದ ಪ್ರಲ್ಹಾದ್ ಜೋಶಿ

ಮುಂದಿನ ಸುದ್ದಿ
Show comments