Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯದಲ್ಲಿ ಮಂಗನ ಕಾಯಿಲೆ ಆತಂಕ!

ಮಂಗನ ಕಾಯಿಲೆ

geetha

bangalore , ಭಾನುವಾರ, 11 ಫೆಬ್ರವರಿ 2024 (21:00 IST)
ಬೆಂಗಳೂರು :ಕಳೆದ ಒಂದು ತಿಂಗಳಲ್ಲಿ 3157 ಮಂದಿಗೆ ಮಂಗನ ಕಾಯಿಲೆ  ಪರೀಕ್ಷೆ ನಡೆಸಲಾಗಿದ್ದು 76 ಮಂದಿಗೆ ಸೋಂಕು ತಗುಲಿರುವುದು ಸ್ಪಷ್ಟವಾಗಿತ್ತು. ಕಳೆದ 24 ಗಂಟೆಯಲ್ಲಿ 6 ಮಂದಿಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರುವುದು ಮತ್ತೆ ಆತಂಕ ಸೃಷ್ಟಿಸಿದೆ. ಒಟ್ಟಾರೆ ಪರೀಕ್ಷೆಗೊಳಗಾದ 145 ಮಂದಿಯಲ್ಲಿ 6 ಮಂದಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. 
 
 ರಾಜ್ಯದಲ್ಲಿ 21 ಸಕ್ರಿಯ ಪ್ರಕರಣಗಳು ಇದ್ದು, ಆರೋಗ್ಯ ಇಲಾಖೆ ಸೂಚಿಯಂತೆ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಮಂಗನ ಕಾಯಿಲೆ ತಡೆಗಟ್ಟಲು ಆರೋಗ್ಯ ಇಲಾಖೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಪಟ್ಟಿ ನೀಡಿದೆ.
 
ಕಾಡು, ತೋಟದಿಂದ ಬಂದ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು
 
ಧರಿಸಿದ ಬಟ್ಟೆಯನ್ನು ಬಿಸಿ ನೀರಿನಲ್ಲಿ ನೆನೆಸಿ ಸೋಪಿನಿಂದಾ ತೊಳೆಯುವುದು

ಕಾಡಿಗೆ ಹೋಗುವಾಗ ಸುರಕ್ಷತೆಗಾಗಿ ಮೈ ತುಂಬ ಬಟ್ಟೆ ಧರಿಸುವುದು
 
ಕಾಡು ಅಥವಾ ತೋಟಕ್ಕೆ ಹೋಗುವಾಗ DEPA ಉಣ್ಣೆ ವಿಕರ್ಷಕ ತೈಲ ಲೇಪಿಸಿಕೊಳ್ಳುವುದು
 
ಕಾಡಿನಿಂದ ಮನೆಗೆ ಉಣ್ಣೆ ಬರದಂತೆ ಸುರಕ್ಷತಾ ಕ್ರಮವಹಿಸಬೇಕು
 
ಜಾನುವಾರುಗಳ ಮೈಯಿಂದ ಉಣ್ಣೆ ತೆಗೆದು,ಉಣ್ಣೆ ನಿವಾರಕ ತೈಲ ಲೇಪಿಸಬೇಕು. ಉಣ್ಣೆ ನಿವಾರಕ ತೈಲವನ್ನು ಕೊಟ್ಟಿಗೆ ಹಾಗೂ ಸುತ್ತಮುತ್ತ ಸಿಂಪಡಿಬೇಕು
 
ಮಂಗಗಳು ಸತ್ತಿರುವುದು ಕಂಡು ಬಂದರೆ ಗ್ರಾಮ ಪಂಚಾಯತಿ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು
 

Share this Story:

Follow Webdunia kannada

ಮುಂದಿನ ಸುದ್ದಿ

ತುಮಕೂರಿನಲ್ಲಿ ತಮ್ಮ ಸಂಚಾರ ಮುಂದುವರೆಸಿದ ಸೋಮಣ್ಣ