ಚಿಂಚೋಳಿ: ತಾಲ್ಲೂಕಿನ ಚಂದು ನಾಯಕ ತಾಂಡಾದಲ್ಲಿ ಹೆಣ್ಣು ಮಗುವಿನ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಹಾಗೂ ಮಧ್ಯವರ್ತಿಯಾಗಿದ್ದ ಆಶಾ ಕಾರ್ಯಕರ್ತೆ ಸೇರಿ ಐದು ಮಂದಿಯನ್ನು ಕುಂಚಾವರಂ ಪೊಲೀಸರು ಬಂಧಿಸಿದ್ದಾರೆ.
ಅನುಸೂಯಾ, ರಾಮಚಂದ್ರ ದಂಪತಿಗೆ ಜ.9ರಂದು ನಾಲ್ಕನೇ ಮಗು ಜನಿಸಿತು. ಅದು ಹೆಣ್ಣು ಆಗಿದ್ದರಿಂದ ಮನೆಗೆ ತಂದರೆ ಕೊಲ್ಲುವುದಾಗಿ ಪತಿಯು ಪತ್ನಿಗೆ ಎಚ್ಚರಿಕೆ ನೀಡಿದ್ದ ಎಂದು ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.
ಮಗುವನ್ನು ಕೊಲ್ಲುವುದು ಬೇಡ. ಬೇರೆಯವರಿಗೆ ಸಾಕಲು ನೀಡಬಹುದು ಎಂಬ ಸಲಹೆಯ ಮೇರೆಗೆ ಫೆ. 8ರಂದು ಆಶಾ ಕಾರ್ಯಕರ್ತೆ ಸುವರ್ಣಾ ಮೂಲಕ ವ್ಯವಹಾರ ಕುದುರಿಸಿ 15 ಸಾವಿರ ರೂಪಾಯಿಗೆ ಟಿ.ಪೌಲ್ ದಂಪತಿಗೆ ಮಗುವನ್ನು ಮಾರಾಟ ಮಾಡಿದ್ದ.
ಮಗು ಆರೋಗ್ಯವಾಗಿದ್ದು, ಅದನ್ನು ಕಲಬುರ್ಗಿಯ ಅಮೂಲ್ಯ ಶಿಶುಗೃಹಕ್ಕೆ ದಾಖಲಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ