Webdunia - Bharat's app for daily news and videos

Install App

ನಿದ್ರಿಸಲು ಬಿಡದ ಮಗನ ಉಸಿರನ್ನೇ ನಿಲ್ಲಿಸಿದ ತಂದೆ

Krishnaveni K
ಶುಕ್ರವಾರ, 1 ಮಾರ್ಚ್ 2024 (10:29 IST)
ಧಾರವಾಡ: ಮಕ್ಕಳು ಹಠ ಮಾಡುವುದು, ಅಳುವುದು ಸಾಮಾನ್ಯ. ಪೋಷಕರಾದವರು ಮಕ್ಕಳನ್ನು ಸಾಮಾಧಾನಿಸಿ, ಮುದ್ದು ಮಾಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ಭೂಪ ಮಗು ಅಳುತ್ತದೆ ಎಂದು ಅದರ ಜೀವವನ್ನೇ ತೆಗೆದಿದ್ದಾನೆ.

ಮಲಗಿದಾಗ ಅತ್ತು ರಂಪ ಮಾಡುತ್ತದೆ ಎಂದು ಒಂದು ವರ್ಷದ ಮಗುವನ್ನು ತಂದೆಯೇ ಹತ್ಯೆ ಮಾಡಿದ ಘಟನೆ ಧಾರವಾಡದ ಯಾದವಾಡ ಗ್ರಾಮದಲ್ಲಿ ನಡೆದಿದೆ. 1 ವರ್ಷದ ಹೆಣ್ಣು ಮಗು ಶ್ರೇಯಾ ಸಾವನ್ನಪ್ಪಿದವಳು. ಆರೋಪಿ ಶಂಭುಲಿಂಗಯ್ಯ (38) ಎಂಬಾತ ಪಾಪಿ ತಂದೆ.

ಮಂಗಳವಾರ ರಾತ್ರಿ ಘಟನೆ ನಡೆದಿದೆ. ಕೂಲಿ ಕೆಲಸ ಮಾಡುವ ಶಂಭುಲಿಂಗಯ್ಯ ರಾತ್ರಿ ಪತ್ನಿ ಜೊತೆ ಜಗಳವಾಡಿದ್ದ. ಬಳಿಕ ಮಲಗಿದ್ದಾಗ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಗು ಅಳಲಾರಂಭಿಸಿದೆ. ಅದರ ಅಳುವಿನ ಕಿರಿ ಕಿರಿಗೆ ಕೋಪಗೊಂಡ ಆರೋಪಿ ಮಗುವಿನ ಕಾಲುಗಳನ್ನು ಹಿಡಿದು ನೆಲಕ್ಕೆ ಬಡಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

ಪತ್ನಿ ಜೊತೆಗಿನ ಕಲಹದ ಆಕ್ರೋಶದಲ್ಲೇ ಆರೋಪಿ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಅಪ್ಪ-ಅಮ್ಮನ ಜಗಳಕ್ಕೆ ಏನೂ ಅರಿಯದ ಮುಗ್ಧ ಕಂದಮ್ಮ ಪ್ರಾಣ ಕಳೆದುಕೊಳ್ಳುವಂತಾಗಿದೆ. ಈ ಹೃದಯ ವಿದ್ರಾವಕ ಘಟನೆ ಇಡೀ ಗ್ರಾಮಸ್ಥರಿಗೆ ಶಾಕ್ ತಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

Mamata Banerjee:ಪಾಕಿಸ್ತಾನ ವಿರುದ್ಧ ವಿಶ್ವಕ್ಕೆ ಮನವರಿಕೆ ಮಾಡಲು ನಮ್ಮ ಸಂಸದರನ್ನು ಕಳಿಸಲ್ಲ ಎಂದ ಮಮತಾ ಬ್ಯಾನರ್ಜಿ

Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು

India Pakistan: ಭಾರತದ ವಿರುದ್ಧ ಸೋತು ಸುಣ್ಣವಾದ ಬಳಿಕ ಚೀನಾ ಬಳಿ ಓಡಿದ ಪಾಕಿಸ್ತಾನ

ಮುಂದಿನ ಸುದ್ದಿ
Show comments