ರೈತ ಸಂಘಟನೆಗಳು ಕಳೆದ 1 ತಿಂಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಇಂದು ಅಧಿಕೃತವಾಗಿ ಹಿಂಪಡೆದಿದೆ.
ವಿವಾದಿತ ಕೃಷಿ ಮಸೂದೆ ರದ್ದಿಗೆ ಆಗ್ರಹಿಸಿ ರೈತ ಸಂಘಟನೆಗಳು ಕಳೆದ 378 ದಿನಗಳಿಂದ ದೆಹಲಿಯ ಸಿಂಘು ಗಡಿಯಲ್ಲ ಪ್ರತಿಭಟನೆ ನಡೆಸುತ್ತಿದ್ದು, ಶನಿವಾರ ಈ ಜಾಗವನ್ನು ತೆರವು ಮಾಡುವುದಾಗಿ ತಿಳಿಸಿವೆ.ಕೃಷಿ ಮಸೂದೆ ವಾಪಸ್ ಪಡೆದ ನಂತರವೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿದ್ದವು. ಕೇಂದ್ರ ಸರಕಾರ ಈ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರೂ ಕೆಲವೊಂದು ಲೋಪದೋಷಗಳನ್ನು ಸರಿಪಡಿಸಲು ಪಟ್ಟು ಹಿಡಿದಿದ್ದವು.
ಕೇಂದ್ರ ಸರಕಾರ ಬೇಷರತ್ತಾಗಿ ಎಲ್ಲಾ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಅಧಿಕೃತವಾಗಿ ಹಿಂಪಡೆಯುವುದಾಗಿ ಘೋಷಿಸಿದವು.