ರೈತರ ಅಲ್ಪವಾಧಿ ಬೆಳೆ ಸಾಲ ಮನ್ನಾ ಕುರಿತಂತೆ ಫಲಾನುಭವಿಗಳ ಮಾಹಿತಿಯನ್ನು ಕಲೆಹಾಕಲು ಭೂಮಿ ಉಸ್ತುವಾರಿ ಕೋಶದಿಂದ ಅಭಿವೃದ್ಧಿಪಡಿಸಲಾದ ಸಾಫ್ಟವೇರ್ ಕಾರ್ಯನಿರ್ವಹಣೆ ಬಗ್ಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಮತ್ತು ಡಿ.ಸಿ.ಸಿ ಬ್ಯಾಂಕ್ ಅಧಿಕಾರಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕಲಬುರಗಿಯಲ್ಲಿ ನಡೆದ ಈ ತರಬೇತಿ ಶಿಬಿರದಲ್ಲಿ ರಾಜ್ಯದ ರೈತರು ಸಹಕಾರ ಸಂಘ/ ಬ್ಯಾಂಕುಗಳಿಂದ ಅಲ್ಪಾವಧಿ ಬೆಳ ಸಾಲ ಪಡೆದು ದಿ.10-07-2018ಕ್ಕೆ ಹೊಂದಿರವ ಹೊರಬಾಕಿಯಲ್ಲಿ ಒಂದು ರೈತ ಕುಟಂಬಕ್ಕೆ ಗರಿಷ್ಠ 1 ಲಕ್ಷ ರೂ.ಗಳಂತೆ ರಾಜ್ಯ ಸರ್ಕಾರ ಇತ್ತೀಚೆಗೆ ಸಾಲ ಮನ್ನಾ ಮಾಡಲಾಗಿದೆ.
ಈ ಸಂಬಂಧ ಫಲಾನುಭವಿಗಳು ಇದರ ಸೌಲಭ್ಯ ಪಡೆಯಲು ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ಅವಶ್ಯಕತೆ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ಅವರ ಅಧ್ಯಕ್ಷತೆಯಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು. ಇದರಲ್ಲಿ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪ್ಯಾಕ್ಸ್ ಕಾರ್ಯದರ್ಶಿಗಳು, ಡಿ.ಸಿ.ಸಿ. ಬ್ಯಾಂಕ್ ಅಧಿಕಾರಿ ಸಿಬ್ಬಂದಿಗಳು, ಡಿ.ಆರ್.ಸಿ., ಎ.ಆರ್.ಸಿ., ಸಿ.ಡಿ.ಓ. ಮತ್ತು ತಾಲೂಕು ವ್ಯವಸ್ಥಾಪಕರು ಭಾಗವಹಿಸಿದ್ದರು.