Publish Date: Sat, 06 Oct 2018 (18:15 IST)
Updated Date: Sat, 06 Oct 2018 (18:17 IST)
ರೈತರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಾಲಮನ್ನಾ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಆರೋಪ ಮಾಡಿದ್ದಾರೆ.
ಸಾಲಮನ್ನಾ ಹೆಸರಿನಲ್ಲಿ ಸಿಎಂ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗುತ್ತಿಲ್ಲ ಎಂದು ದೂರಿದ ಅವರು, ರೈತರ ಆತ್ಮಹತ್ಯೆ ಮುಂದುವರಿದಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರಿಗೆ ನೋಟೀಸ್ ಬರುತ್ತಿವೆ ಎಂದು ಆರೋಪಿಸಿದರು.
ಜನರು ಕಟ್ಟುತ್ತಿರುವ ತೆರಿಗೆ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿರುವ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ತುಘಲಕ್ ಸರಕಾರವಿದೆ. ಇತಿಹಾಸದಲ್ಲಿಯೇ ಇಂಥ ಸರಕಾರವನ್ನು ನೋಡಿಲ್ಲ ಎಂದು ಹರಿಹಾಯ್ದರು.