Publish Date: Sat, 09 Jul 2022 (16:50 IST)
Updated Date: Sat, 09 Jul 2022 (15:52 IST)
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಎಂಬಂತೆ ನಕಲಿ ಅಂತರಾಷ್ಟ್ರೀಯ ಕಾಲ್ ಸೆಂಟರ್ ವೊಂದು ಪತ್ತೆಯಾಗಿದ್ದು, 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು.. ಅಮೆರಿಕ ಪ್ರಜೆಗಳ ಬ್ಯಾಂಕ್ ವಿವರ ಪಡೆದು ವಂಚಿಸಿದ ಆರೋಪದ ಮೇಲೆ ವೈಟ್‌ಫೀಲ್ಡ್ ಮತ್ತು ಮಹದೇವಪುರ ಪ್ರದೇಶದಲ್ಲಿರುವ ಬೆಂಗಳೂರು ಮೂಲದ ನಕಲಿ ಅಂತಾರಾಷ್ಟ್ರೀಯ ಕಾಲ್ ಸೆಂಟರ್‌ನ ಎರಡು ಶಾಖೆಗಳ ಮೇಲೆ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ.