ಕನ್ನಡ ನಾಯಕ ನಟರನ್ನು ನಿಂದಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಆರೋಪಿಗೆ ಜನತೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ತಮಿಳುನಾಡು ಮೂಲದ ಶ್ರೀರಾಂಪುರದ ನಿವಾಸಿಯಾದ ಸಂತೋಷ್ ಎಂಬಾತನೇ ಆರೋಪಿಯಾಗಿದ್ದು, ಪಿಎಸ್ಇ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡ ನಾಯಕ ನಟರ ವಿರುದ್ಧ ಅಸಭ್ಯ ಭಾಷೆ ಬಳಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರಿಂದ ಬೆಂಗಳೂರಿನ ಗಿರಿನಗರದಲ್ಲಿ ಸಂತೋಷ್‌ಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.
ಪ್ರತಿನಿತ್ಯ ಕನ್ನಡ ನಾಯಕ ನಟರ ಬಗ್ಗೆ ಅಸಭ್ಯ ಭಾಷೆ ಬಳಸಿ ಪೋಸ್ಟ್ ಮಾಡಿದ್ದಲ್ಲದೇ ವಿವರಣೆ ಕೇಳಿದಾಗ ಸಂತೋಷ್ ಅಹಂಕಾರದಿಂದ ವರ್ತಿಸಿದ ಹಿನ್ನೆಲೆಯಲ್ಲಿ ಯುವಕರು ಗುಂಪು ಮನಬಂದಂತೆ ಥಳಿಸಿದೆ. ಹಿಗ್ಗಾ ಮುಗ್ಗಾ ಥಳಿಸಿದ ಬಳಿಕ ಆರೋಪಿ ಕ್ಷಮೆಯಾಚಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ