Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫೇಸ್ ಬುಕ್ ಲವರ್ ಜೊತೆ ಓಡಿಹೋಗಿ ಹೆಣವಾದ ಮಹಿಳೆ

ಫೇಸ್ ಬುಕ್ ಲವರ್ ಜೊತೆ ಓಡಿಹೋಗಿ ಹೆಣವಾದ ಮಹಿಳೆ
ಲಕ್ನೋ , ಶುಕ್ರವಾರ, 25 ಅಕ್ಟೋಬರ್ 2019 (16:13 IST)

ಅಕ್ರಮ ಸಂಬಂಧ ದುಃಖದಲ್ಲಿ ಅಂತ್ಯಗೊಳ್ಳುತ್ತೆ ಅನ್ನೋದು ಮತ್ತೆ ಸಾಬೀತಾಗಿದೆ.

ಮೋಸಿನಾ ಎಂಬುವವಳಿಗೆ ಗಂಡ ಜೊತೆಗೆ ಮೂರು ಮಕ್ಕಳು ಇದ್ದರು. ಆದರೂ ಅಕ್ರಮ ಸಂಬಂಧವನ್ನು ಫೇಸ್ ಬುಕ್ ಗೆಳೆಯನೊಂದಿಗೆ ಬೆಳೆಸಿದ ಆಕೆ ಮನೆ ಬಿಟ್ಟು ಓಡಿಹೋದಳು.

ಫೇಸ್ ಬುಕ್ ಲವರ್ ಜೊತೆ ಕೆಲದಿನಗಳ ಕಾಲ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಳು. ಆದರೆ ಆ ಲವರ್ ಗೂ ಮೊದಲೇ ಬೇರೆ ಮದುವೆಯಾಗಿತ್ತು. ಹೀಗಾಗಿ ಮತ್ತಷ್ಟು ನೊಂದಿದ್ದ ಮೋಸಿನಾ ಲಕ್ನೋದ ಬಂಥರಾದಲ್ಲಿ ಫೇಸ್ ಬುಕ್ ಗೆಳೆಯ ಮಾಡಿಕೊಟ್ಟಿದ್ದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪ್ರಿಯತಮೆಯ ಶವ ನೋಡಿದ ಫೇಸ್ ಬುಕ್ ಲವರ್ ಮಹೇಂದ್ರ ಎಂಬಾತ ಆಕೆ ಮುಖಕ್ಕೆ ಎಸಿಡ್ ಸುರಿದು ಗುರುತು ಸಿಗದಂತೆ ಮಾಡಿ ಶವವನ್ನು ರಸ್ತೆಗೆ ಎಸೆದಿದ್ದನು.

ತನಿಖೆ ಕೈಗೊಂಡ ಪೊಲೀಸರು ಶವ ಮೋಸಿನಾಳದೆಂದು ಗುರ್ತಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಟ್ಟು ಹೋದ ಬ್ಯಾಗ್ ಮರಳಿಸಿ ಪ್ರಮಾಣಿಕತೆ ಮೆರೆದ ಆಟೋ ಚಾಲಕ