Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹೃದಯಾಘಾತದಿಂದ ಮೃತಪಟ್ಟ ಪುನೀತ್ ರಾಜಕುಮಾರ್ ತಮ್ಮ ಕಣ್ಣುಗಳನ್ನ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಹೀಗಾಗಿ ಪುನೀತ್ ರಾಜಕುಮಾರ್ ನಿಧನದ ನಂತರ ನೂರಾರು ಜನರು ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಪವರ್ ಸ್ಟಾರ್ ಜೀವಂತ ಇದ್ದಾಗಲೂ ರಾಜನಂತೆ ಬಾಳ ಬದುಕಿದವರು. ಪುನೀತ್ ಇನ್ನಿಲ್ಲ ಅನ್ನೋ ಸತ್ಯ ಅರಗಿಸಿಕೊಳ್ಳಲು ಆಗದಿದ್ದರೂ ಅವರ ಆದರ್ಶಗಳು ಮಾತ್ರ ಸಮಾಜದಲ್ಲಿ ಅಜರಾಮರವಾಗಿದೆ.ಹೃದಯಾಘಾತದಿಂದ ಪುನೀತ್ ರಾಜಕುಮಾರ್ ಮೃತಪಟ್ಟ ನಂತರ ಅವರ ಕಣ್ಣುಗಳನ್ನ ದಾನ ಮಾಡಲಾಗಿತ್ತು. ಪುನೀತ್ ಕಣ್ಣುಗಳನ್ನ ಇದೀಗ ನಾಲ್ವರಿಗೆ ಅಳವಡಿಸಿರುವುದರಿಂದ ನಾಲ್ವರ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಹೀಗಾಗಿ ಪುನೀತ್ ಮೃತಪಟ್ಟ ಒಂದೇ ವಾರದೊಳಗೆ ಬರೋಬ್ಬರಿ 500 ಜನರು ನೇತ್ರದಾನಕ್ಕೆ ಮುಂದಾಗಿರುವುದು ವಿಶೇಷವಾಗಿದೆ. ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರ ಚಿಕಿತ್ಸಾಲಯದವೊಂದರಲ್ಲಿಯೇ ಐದು ನೂರಕ್ಕೂ ಹೆಚ್ಚು ಜನ ನೇತ್ರ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.